ಐಡಿಯ-ವೊಡಾಫೋನ್ ವಿಲೀನ ಸಂಭವ

  ಉಚಿತ ಡೇಟಾ ಮತ್ತು ಕರೆ ಸೇವೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಿದ ರಿಲಯನ್ಸ್ ಜಿಯೊ ಅಬ್ಬರ ಜೋರಾಗಿದೆ. ಜಿಯೊಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಆದಿತ್ಯ ಬಿರ್ಲಾ ಸಮೂಹದ ಐಡಿಯಾ ಸೆಲ್ಯಲರ್ ಮತ್ತು ಬ್ರಿಟನ್ ಮೂಲದ ವೊಡಾಫೋನ್ ಕಂಪನಿಗಳು ತಮ್ಮ ಆಟದ ಯೋಜನೆ ಬದಲಿಸಲಿವೆ. ಭಾರತೀಯ ಮಾರುಕಟ್ಟೆಯಲ್ಲಿ ಏರ್‌ಟೆಲ್ ನಂತರದ ಎರಡನೇ ಬೃಹತ್ ಮೊಬೈಲ್ ಕಂಪನಿ ಎನ್ನುವ ಹೆಗ್ಗಳಿಕೆ ವೊಡಾಫೋನ್ ಹೊಂದಿದೆ. ಮೂರನೇ ಸ್ಥಾನದಲ್ಲಿರುವ ಐಡಿಯದ ಜೊತೆ ವಿಲೀನಕ್ಕೆ ಕಸರತ್ತು ಆರಂಭವಾಗಿದೆ. ಇವೆರಡೂ ಕಂಪನಿಗಳು ವಿಲೀನವಾದರೆ 39 ಕೋಟಿ ಚಂದಾದಾರರ ಬೃಹತ್ ಕಂಪನಿ ರೂಪುಗೊಳ್ಳಲಿದೆ. ಏರ್‌ಟೆಲ್ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಕುಸಿಯಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.