ಅರಣ್ಯ ಇಲಾಖೆ ಕರ್ತವ್ಯದಲ್ಲಿದ್ದ ಜಗನ್ನಿವಾಸ ರಾವ್ ಮುಂಡಾಜೆ ಅವರಿಗೆ ಸೇವಾ ನಿವೃತ್ತಿ

Advt_NewsUnder_1
Advt_NewsUnder_1
Advt_NewsUnder_1

jaganivasa rao copyಬೆಳ್ತಂಗಡಿ : ಇಲ್ಲಿನ ಅರಣ್ಯ ಇಲಾಖಾ ಕಚೇರಿಯಲ್ಲಿ ಸುದೀರ್ಘ ೩೯ ವರ್ಷಗಳಿಂದ ಸೇವೆ ಸಲ್ಲಿಸಿದ್ದ ಜಗನ್ನಿವಾಸ ರಾವ್ ಮುಂಡಾಜೆ ಅವರಿಗೆ ಜ. 31 ರಂದು ಸೇವಾ ನಿವೃತ್ತಿಯಾಗಿದೆ. ಅರಣ್ಯ ರಕ್ಷಕರಾಗಿದ್ದು ಕ್ಷೇತ್ರ ಸಿಬ್ಬಂದಿಯಾಗಿದ್ದರೂ ಕೂಡ ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಅವರು ಕಚೇರಿ ಕೆಲಸದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸರಳ ಸಜ್ಜನಿಕೆ, ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕ ಕರ್ತವ್ಯ ನಿರ್ವಹಣೆಯ ಮೂಲಕ ಮಿತಭಾಷಿಯಾಗಿದ್ದು ಕರ್ತವ್ಯದ ವೇಳೆ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿವರ್ಗ ಮತ್ತು ಸಿಬ್ಬಂದಿಗಳು ಹಾಗೂ ಜನ ಸಾಮಾನ್ಯರ ವಿಶೇಷ ಮೆಚ್ಚುಗೆಗೆ ಪಾತ್ರರಾಗಿದ್ದು, ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದರು. ದಿನಗೂಲಿ ನೌಕರನಾಗಿ ಅರಣ್ಯ ಇಲಾಖೆಯ ಕೆಲಸಕ್ಕೆ ಸೇರಿದ್ದ ಅವರನ್ನು 10 ವರ್ಷಗಳ ಸೇವಾ ಹಿರಿತನ ಅವಧಿ ಪರಿಗಣಿಸಿ 1090 ರಲ್ಲಿ ನೇಮಕಾತಿಗೊಳಿಸಲಾಗಿತ್ತು. ಒಟ್ಟು 39 ವರ್ಷಗಳಲ್ಲಿ ಅವರು ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಕಚೇರಿಯಲ್ಲೇ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತರಿಗೆ ತಾಯಿ, ಸಹೋದರರು, ಪತ್ನಿ, ಮೂವರು ಮಕ್ಕಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.