ಕಂಬಳ-ಕೋಳಿ ಅಂಕ ಉಳಿಸಲು ಸರಕಾರಕ್ಕೆ ತುಳುನಾಡ್ ಒಕ್ಕೂಟದಿಂದ ತಹಶೀಲ್ದಾರ್ ಮೂಲಕ ಮನವಿ

Advt_NewsUnder_1
Advt_NewsUnder_1
Advt_NewsUnder_1

thulu okkutadinda manavi copyಬೆಳ್ತಂಗಡಿ : ತುಳುನಾಡಿನ ಅತ್ಯಂತ ಪುರಾತನ ರೈತರ ಕೃಷಿ ಕಾರ್ಮಿಕರ ಕೃಷಿ ಚಟುವಟಿಕೆ ಬಿಡುವಿನ ವೇಳೆಯಲ್ಲಿ ನಡೆಸುತ್ತಿದ್ದ ಮನೋರಂಜನೆಯ, ಧಾರ್ಮಿಕ ಸಾಮಾಜಿಕ ಹಿನ್ನಲೆಯುಳ್ಳ ಕಂಬಳ, ಕೋಳಿ ಅಂಕ ಮುಂತಾದ ಕ್ರೀಡೆಗಳನ್ನು ಉಳಿಸಲು ಕ್ರಮ ಕೈಗೊಳ್ಳುವಂತೆ ತುಳುನಾಡು ಒಕ್ಕೂಟದಿಂದ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸೂಕ್ತವಾದ ಕಾನೂನು ಚೌಕಟ್ಟಿನೊ ಳಗೆ ಮದ್ಯ, ಜೂಜು ರಹಿತ ಕಂಬಳ ಮತ್ತು ಕೋಳಿ ಅಂಕ ನಡೆಸಲು ಅನುವು ಮಾಡಿಕೊಡುವ ಮೂಲಕ ತುಳುನಾ ಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸಲು ಸರಕಾರವು ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ಒತ್ತಾಯಿಸಲಾಯಿತು. ಈ ಸಂದರ್ಭ ಅಧ್ಯಕ್ಷ ಶೈಲೇಶ್ ಆರ್ ಜೆ, ಉಪಾಧ್ಯಕ್ಷ ಪ್ರದೀಪ್ ಎರ್ನೋಡಿ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಎಣಿಂಜೆ, ನಗರ ಘಟಕ ಅಧ್ಯಕ್ಷ ಜನಾರ್ದನ ಬಂಗೇರ ಮೂಡಾಯಿಗುತ್ತು, ನಗರ ಕಾರ್ಯದರ್ಶಿ ಗೋಪಾಲಕೃಷ್ಣ ಸಂಜಯನಗರ, ಕಾನೂನು ಘಟಕದ ಅಧ್ಯಕ್ಷ ವಕೀಲ ಪ್ರಶಾಂತ್ ಎಂ., ನವೀನ್ ಪೂಜಾರಿ ಅಡ್ಕದ ಬೈಲು, ಆನಂದ ಅಡೀಲು, ಸುರೇಂದ್ರ ಕೋಟ್ಯಾನ್, ಪ್ರದೀಪ್ ಗೌಡ, ಸುರೇಶ್ ಶಿರ್ಲಾಲು, ರಾಜೇಶ್ ಕುಲಾಲ್ ಬೈರೊಟ್ಟು, ಸಂತೋಷ್ ಕುಮಾರ್ ತಗೆಕ್ಕಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.