ಅರುಣೋದಯ ಯುವಕ ಮಂಡಲದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

trofy copy ಮರೋಡಿ : ಅರುಣೋದಯ ಯುವಕ ಮಂಡಲ ಮರೋಡಿ ಇದರ 27ನೇ ವರ್ಷದ ವಾರ್ಷಿಕೋತ್ಸವ ಜ.೨೮ ರಂದು ಹೊನಲು ಬೆಳಕಿನ ಸೂಪರ್ ಸಿಕ್ಸ್ 7 ಜನರ ಕ್ರಿಕೇಟ್ ಪಂದ್ಯಾಟವನ್ನು ಅರುಣೋದಯ ಯುವಕ ಮಂಡಲದ ವಠಾರ ಕೆಳಗಿನ ಗುಡ್ಡನ್‌ಬೆಟ್ಟು ಮೈದಾನದಲ್ಲಿ ನಡೆಸಲಾಯಿತು.
ಅಧ್ಯಕ್ಷತೆಯನ್ನು ಜಯಂತ್ ಕೋಟ್ಯಾನ್ ವಹಿಸಿ ಮಾತನಾಡಿ ಕ್ರೀಡೆಯನ್ನು ನಡೆಸುವ ಉದ್ದೇಶ ಯುವಕರಲ್ಲಿ ಇರುವ ದ್ವೇಷ ಭಾವನೆಯನ್ನು ಹೋಗಲಾಡಿಸಿ ಸೌಹಾರ್ಧತೆ ಮೂಡಿಸುವುದರೊಂದಿಗೆ ಸಮಾಜದಲ್ಲಿ ಉತ್ತಮ ಗುರಿ ಸಾಧಿಸುವ ಕೆಲಸ ಯುವಕರಲ್ಲಿ ಮೂಡಲಿ ಎಂದು ನುಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ದಿನೇಶ್ ಹೆಗ್ಡೆ, ಹೆಗ್ಡೆ ನಿವಾಸ, ಮರೋಡಿ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸತೀಶ್ ಕೆ. ಕಾಶಿಪಟ್ಣ ಸಮಿತ್ ರಾಜ್ ಸಿದ್ದಕಟ್ಟೆ ಹಿರಣಿ, ಕಿಟ್ಟು ಲೈನ್‌ಮ್ಯಾನ್ ನಾರಾವಿ, ಸ್ಟಾನಿ ಪಾಯಸ್, ಮುಂಡಾಜೆ ಗ್ರಾ.ಪಂ ಅಧ್ಯಕ್ಷ ಅಬ್ದುಲ್, ಅಜೀಜ್ ಕಾಶಿಪಟ್ಣ, ಬಿ.ಜೆ.ಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜಾ, ಗ್ರಾ.ಪಂ ಸದಸ್ಯ ಪ್ರವೀಣ್ ಪಿಂಟೊ, ರಾಮಚಂದ್ರ ಭಟ್, ನಿಕಟ ಪೂರ್ವ ಅಧ್ಯಕ್ಷ ಲಯನ್ಸ್ ಕ್ಲಬ್ ನಾರಾವಿ, ಪೆರಾಡಿ ವ್ಯವಸಾಯ ಸೇವಾ ಬ್ಯಾಂಕ್‌ನ ಮೆನೇಜರ್ ಶೇಕ್ ಲತಿಫ್‌ರವರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಕೆ ಮಾಡಿದರು. ಜ. ೨೯ರಂದು ಸಮಾರೋಪ ಸಮಾರಂಭವನ್ನು ಯುವಕ ಮಂಡಲದ ಅಧ್ಯಕ್ಷ ಹರೀಶ್ ಎಂ. ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನಿಕಟ ಪೂರ್ವ ಅಧ್ಯಕ್ಷ ಫಕೀರಬ್ಬ ಎಂ. ಅಭಿನಂದನಾ ಭಾಷಣ ನಡೆಸಿದರು. ಅಬ್ಬುಬಕ್ಕರ್ ಹೆಡ್ ಕಾನ್ಸ್‌ಟೇಬಲ್ ಪುಂಜಾಲಕಟ್ಟೆ ಠಾಣೆ, ಅರುಣ್ ಡಿಸೋಜ ಮರೋಡಿ, ಸಂಜೀವ ಪೂಜಾರಿ ಕೆಳಗಿನ ಗುಡ್ಡನ್‌ಬೆಟ್ಟು, ಅಬ್ಬುಬಕ್ಕರ್ ಮರೋಡಿ, ಕ್ರೀಡಾ ಕಾರ್ಯದರ್ಶಿ ಪ್ರಸಾದ್ ಕೋಟ್ಯಾನ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.