ಡಿ.ವಿ. ಸದಾನಂದ ಗೌಡರ ಅಭಿನಂದನಾ ಗ್ರಂಥ ಸದಾಸ್ಮಿತ ಬಿಡುಗಡೆ

DVS abinandane  grantha  bidugade copyಬೆಳ್ತಂಗಡಿ : ಮಾಜಿ ಮುಖ್ಯಮಂತ್ರಿ, ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದ ಗೌಡರ ಅಭಿನಂದನಾ ಸಮಿತಿಯ ವತಿಯಿಂದ ಸದಾಸ್ಮಿತ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಬೆಂಗಳೂರಿನ ಅರಮನೆ ಆವರಣ ದಲ್ಲಿರುವ ಶ್ರೀ ಗಾಯತ್ರಿ ವಿಹಾರದಲ್ಲಿ ಜ.28ರಂದು ಸಂಜೆ ನಡೆಯಿತು.
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಉದ್ಘಾಟಿಸಿ, ನಾವು ಇವತ್ತು ಎಲ್ಲಾ ಪಕ್ಷದವರು ಸದಾನಂದ ಗೌಡರ ಮೇಲಿನ ಪ್ರೀತಿಯಿಂದ ಬಂದಿದ್ದೇವೆ. ಅವರಿಗೆ ರಾಜಕೀಯದಲ್ಲಿ ಇನ್ನೂ ಭವಿಷ್ಯವಿದೆ ಎಂದು ಶುಭಹಾರೈಸಿದರು. ಅಭಿನಂದನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರವರು ಸದಾಸ್ಮಿತ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ನಾಡೋಜ ಪ್ರೊ. ಎಂ.ಎಚ್. ಕೃಷ್ಣಯ್ಯ ಅಭಿನಂದನ ಗ್ರಂಥವನ್ನು ಪರಿಚಯಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಅಜಾತಶತ್ರು ರಾಜಕಾರಣಿ ಎಂದು ಗುರುತಿಸುವುದಿದ್ದರೆ ಅವರಲ್ಲಿ ಸದಾನಂದ ಗೌಡರು ಒಬ್ಬರು. ಅವರು ತುಳುನಾಡಿನ ಪರಂಪರೆ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದು ಆ ಮಣ್ಣಿನ ವಿಶೇಷ ಗುಣ ಎಂದು ಅಭಿನಂಧನ ಭಾಷಣ ಮಾಡಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ನಾಡೋಜ ಡಾ. ಚಂದ್ರಶೇಖರ ಕಂಬಾರ ಅವರು ಮುಖ್ಯ ಅತಿಥಿಯಾಗಿದ್ದರು. ಅಧ್ಯಕ್ಷತೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಹಿಸಿದ್ದರು.
ಅಭಿನಂದನೆ ಸ್ವೀಕರಿಸಿದ ಸಚಿವ ಡಿ.ವಿ. ಸದಾನಂದ ಗೌಡರು ನನಗೆ ರಾಜಕೀಯವಾಗಿ ಆದರ್ಶ ಕಲ್ಪಿಸಿ ಕೊಟ್ಟವರು ವೀರೇಂದ್ರ ಹೆಗ್ಗಡೆಯವರು. ನನ್ನ ಹೆತ್ತ ತಾಯಿ ಕಮಲ, ರಾಜಕೀಯವಾಗಿ ಬೆಳೆಸಿದ ತಾಯಿ ಬಿಜೆಪಿಯ ಕಮಲ, ನಾನು ಇಲ್ಲಿಯ ತನಕ ಪಡೆದ ಹುದ್ದೆಗಳೆಲ್ಲಾ ಬಿ.ಎಸ್. ಯಡಿಯೂರಪ್ಪರಿಂದಲೇ ಆಗಿದೆ ಎಂದ ಡಿ.ವಿ.ಯವರು ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಕುರಿತು ಮಾತನಾಡಿ ದೇವೆಗೌಡರು ತಾನು ನಂಬಿರುವ ತತ್ವ, ಸಿದ್ದಾಂತಗಳಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳದ ವ್ಯಕ್ತಿ ಎಂದು ಹೇಳಿದರು. ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ.ಸಿ. ಸೋಮಶೇಖರ ಸ್ವಾಗತಿಸಿ, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ. ನಾರಾಯಣ ಗೌಡ ವಂದಿಸಿದರು. ಟಿ.ವಿ. ಚಾನೆಲ್ ನಿರೂಪಕಿ ಅಪರ್ಣ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.