ನಾಳ ದೇವಸ್ಥಾನಕ್ಕೆ ಅನ್ನಛತ್ರ ಕೊಡುಗೆ ನೀಡಿದ ಡಾ| ಸದಾಶಿವ ರಾವ್‌ರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

Nala sadashiva rao sanmana copy ನಾಳ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ, ದಿ| ಸಾಯ ರಾಮಚಂದ್ರ ಭಟ್ ಪಲ್ಲಾದೆ ಇವರ ಸ್ಮರಣಾರ್ಥ ‘ಅನ್ನಛತ್ರದ’ ಕೊಡುಗೆ ನೀಡಿದ ಅವರ ಪುತ್ರ ಮಂಗಳೂರು ಕೆ.ಎಂ.ಸಿಯಲ್ಲಿ ಮಕ್ಕಳ ತಜ್ಞರಾಗಿರುವ ಡಾ| ಸದಾಶಿವ ರಾವ್ ಮತ್ತು ಶ್ರೀಮತಿ ಆಶಾಲತಾ ಇವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಕಾರ್ಯಕ್ರಮವು ಜ.26ರಂದು ಜರುಗಿತು.
ಡಾ| ಸದಾಶಿವ ರಾವ್ ಮತ್ತು ಶ್ರಿಮತಿ ಆಶಾಲತಾ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಜಮಾ ಉಗ್ರಾಣದ ಮುತ್ಸದ್ದಿ ಬಿ. ಭುಜಬಲಿ ಮಾತನಾಡಿ ನಾಳ ದೇವಸ್ಥಾನ ವ್ಯಾಪ್ತಿಯ ಗ್ರಾಮದಲ್ಲಿ ಹುಟ್ಟಿ ಮಂಗಳೂರಿನಲ್ಲಿ ದೊಡ್ಡ ವೈದ್ಯರಾಗಿರುವ ಡಾ| ಸದಾಶಿವ ರಾವ್ ಅವರನ್ನು ಸನ್ಮಾನಿಸುವ ಮೂಲಕ ಈ ಪ್ರದೇಶದ ಜನರಿಗೆ ಅವರ ಪರಿಚಯ ಆಗಿದೆ. ಅವರು ಕೊಡುಗೆ ನೀಡಿದ ಅನ್ನಛತ್ರದಲ್ಲಿ ನಿರತಂತರ ಅನ್ನದಾನ ನಡೆಯಲಿ ಎಂದು ಹಾರೈಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ನಾಳ ದೇವಸ್ಥಾನಕ್ಕೆ ಅನ್ನಛತ್ರ ಬೇಕೆಂಬ ನಮ್ಮ ಬಯಕೆ ಈಗ ಈಡೇರಿದೆ. ನಮ್ಮ ಊರಿನವರಾದ ಪಲ್ಲಾದೆ ಡಾ| ಸದಾಶಿವ ರಾವ್ ಅವರು ಅನ್ನಛತ್ರಕ್ಕೆ ರೂ.೫ಲಕ್ಷ ದೇಣಿಗೆ ನೀಡಿ ಸಹಕರಿಸಿದ್ದಾರೆ. ಪ್ರತಿದಿನ ಗ್ರಾಮದ ಜನರು ಬಂದು ಶ್ರಮದಾನದ ಮೂಲಕ ಇದರ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಡಾ| ಸದಾಶಿವ ರಾವ್ ನನ್ನ ತಂದೆಯವರು ಬಹಳಷ್ಟು ಕಷ್ಟಪಟ್ಟು ಜೀವನದಲ್ಲಿ ಮೇಲೆ ಬಂದವರು. ನಾನು ಈ ಸ್ಥಿತಿಗೆ ಬರಬೇಕಾದರೆ ಅವರೇ ಕಾರಣ ಈ ಸನ್ಮಾನವನ್ನು ನಾನು ಅವರಿಗೆ ಅರ್ಪಿಸುತ್ತೇನೆ. ತಂದೆ, ತಾಯಿಯ ಆಶೀರ್ವಾದ ಮತ್ತು ನಾಳ ದೇವಿಯ ಅನುಗ್ರಹದಿಂದ ನಮಗೆ ಎಲ್ಲಾ ಅವಕಾಶಗಳು ಇದೆ. ಇದು ನಾವು ಮಾಡಿದ್ದಲ್ಲ, ದೇವಿಯ ಅನುಗ್ರಹ ಎಂದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಎಂ. ಜನಾರ್ದನ ಪೂಜಾರಿ ಮಾತನಾಡಿ ಅನ್ನಛತ್ರ ನಿರ್ಮಾಣಕ್ಕೆ ಗ್ರಾಮದ ಜನರು ಶ್ರಮದಾನದ ಮೂಲಕ ಕೊಡುಗೆ ನೀಡಿದ್ದಾರೆ. ಅದರಂತೆ ದೈವದ ಆಭರಣ ಮಾಡಲು ಎಲ್ಲಾ ಭಕ್ತರ ಸಹಕಾರ ಕೋರಿದರು. ವೇದಿಕೆಯಲ್ಲಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಮುದ್ದುಂಜ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೆ. ಎನ್ ಆನಂದ ಶೆಟ್ಟಿ ಐಸಿರಿ, ದಿನೇಶ್ ಗೌಡ, ಕೆ.ಎನ್ ಬಾಬು, ಅಂಬಾ ಬಿ.ಆಳ್ವ, ವಿಜಯ ಹೆಚ್.ಪ್ರಸಾದ್, ಭಾರತಿ ವಂಜಾರೆ ಉಪಸ್ಥಿತರಿದ್ದರು. ಕಾರ್ಯಾಲಯ ಸಂಚಾಲಕ ಅಶೋಕ್ ಆಚಾರ್ಯ ಸ್ವಾಗತಿಸಿದರು. ಸುಗುಣ ಆಳ್ವ ಸನ್ಮಾನ ಪತ್ರ ವಾಚಿಸಿದರು. ಶ್ರವಣ್‌ಕುಮಾರ್ ಕಾರ್ಯಕ್ರಮ ನಿರೂಪಿಸಿ, ಸತೀಶ್ ಕುಮಾರ್ ಧನ್ಯವಾದವಿತ್ತರು. ರಾತ್ರಿ ಚಂದ್ರಮಂಡಲ ಉತ್ಸವ, ರಥಬೀದಿ ಕಟ್ಟೆ ಪೂಜೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊರಂಜ ಶಾಲಾ ವಿದ್ಯಾರ್ಥಿಗಳು, ಲೋಕಲ್ ಬಾಯ್ಸ್, ಓಂಕಾರ ಕಲಾವಾಹಿನಿ ಗೇರುಕಟ್ಟೆ ಇವರಿಂದ ಸಾಂಸ್ಕೃತಿಕ ವೈವಿಧ್ಯ, ಯುವ ಫ್ರೆಂಡ್ಸ್ ನಾಳ ಇವರ ಪ್ರಾಯೋಜಕತ್ವದಲ್ಲಿ ಜಾದೂ ಪ್ರದರ್ಶನ, ಮಿಮಿಕ್ರಿ, ನೃತ್ಯ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.