HomePage_Banner_
HomePage_Banner_
HomePage_Banner_

ಉಜಿರೆ : ಎಸ್‌ಡಿಎಂ ’ನುಡಿದನಿ’ ಅನಾವರಣ

Nudi Dani 2 copyಉಜಿರೆ : ಉಜಿರೆಯಲ್ಲಿ ನಡೆಯುತ್ತಿರುವ ೨೧ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಎಸ್‌ಡಿಎಂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಶೇಷ ಪತ್ರಿಕೆ ’ನುಡಿದನಿ’ಯು ಶನಿವಾರ ಮಂಜಯ್ಯ ಹೆಗ್ಗಡೆ ವೇದಿಕೆಯಲ್ಲಿ ಬಿಡುಗಡೆಗೊಂಡಿತು.
ವರ್ಣ ಮುದ್ರಣದೊಂದಿಗೆ ವಿನ್ಯಾಸಗೊಂಡ ಎರಡು ಪುಟಗಳ ಈ ಪತ್ರಿಕೆಯನ್ನು ಸಮ್ಮೇಳನಾಧ್ಯಕ್ಷ ಹಾಗೂ ಹಾವೇರಿ ಜಾನಪದ ವಿಶ್ವವಿದ್ಯಾಲಯದ ಕಲಪತಿ ಡಾ.ಕೆ ಚಿನ್ನಪ್ಪ ಗೌಡ ಬಿಡುಗಡೆಗೊಳಿಸಿದರು.
ಬಿಡುಗಡೆಯ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ, ಪತ್ರಿಕೆಯ ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ಹೆಗಡೆ, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ್, ನಿವೃತ್ತ ಹಿರಿಯ ಆಕಾಶವಾಣಿ ಉದ್ಘೋಷಕಿ ಶ್ರೀಮತಿ ಶಕುಂತಳಾ ಆರ್.ಕಿಣಿ, ತಜ್ಞರಾದ ಡಾ.ಸತ್ಯನಾರಾಯಣ ಮಲ್ಲಿಪಟ್ಟಣ ಹಾಗೂ ಡಾ.ಪುಂಡಿಕ್ಯಾ ಗಣಪಯ್ಯ ಭಟ್, ಪತ್ರಕರ್ತ ಲಕ್ಷ್ಮೀ ಮಚ್ಚಿನ್, ವಿದ್ಯಾರ್ಥಿ ಬರಹಗಾರರಾದ ಕೃಷ್ನಪ್ರಶಾಂತ್, ಛಾಯಾ, ಸುಷ್ಮಿತಾ, ಶಿವಮಲ್ಲಯ್ಯ, ಮತ್ತು ಸುಷ್ಮಾ ಉಪ್ಪಿನ್ ಇಸಳೂರು ಉಪಸ್ಥಿತರಿದ್ದರು.
ಸಾಹಿತ್ಯ ಸಮ್ಮೇಳನದ ಮೆರವಣಿಗೆ, ಉದ್ಘಾಟನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಪವಿತ್ರ ಬಿದ್ಕಲ್‌ಕಟ್ಟೆ, ರಮ್ಯಶ್ರೀ ದೊಂಡೋಲೆ, ಚೈತನ್ಯ ಕುಡಿನಲ್ಲಿ, ಭರತ್ ಭಾರದ್ವಾಜ್ ಬರೆದ ವರದಿಗಳು, ಪೌಲೋಸ್ ಬಿ, ರಂಜಿತ್ ಗೌಡ ನಿಡಗೋಡು, ಚೈತನ್ಯ ಕುಡಿನಲ್ಲಿ ಸೆರೆಹಿಡಿದ ಛಾಯಾಚಿತ್ರಗಳು ಈ ಪುಟಗಳಲ್ಲಿವೆ. ಕೃಷ್ಣಪ್ರಶಾಂತ್ ವಿ ಗೇರುಕಟ್ಟೆ ಪುಟವಿನ್ಯಾಸದ ಈ ಪುಟಗಳನ್ನು ಸಮ್ಮೇಳನದ ಮುಖ್ಯವೇದಿಕೆಯ ಮಹಾದ್ವಾರದ ಬಳಿ ಪ್ರದರ್ಶಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.