HomePage_Banner_
HomePage_Banner_
HomePage_Banner_

ಉಜಿರೆ : ಕನ್ನಡ ಸಾಹಿತ್ಯ ಸಮ್ಮೇಳನ ಧ್ವಜಾರೋಹಣದ ಮೂಲಕ ಚಾಲನೆ

UJIRE 1

UJIRE

 ಉಜಿರೆ :  ದಕ್ಷಿಣ ಕನ್ನಡ ಜಿಲ್ಲಾ 21ನೇ ಯ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳು ಅಧಿಕೃತವಾಗಿ ಧ್ವಜಾರೋಹಣದ ಮೂಲಕ ಚಾಲನೆಗೊಂಡಿತು.
ಸಮ್ಮೇಳನದ ರಾಷ್ಟ್ರ ಧ್ವಜಾರೋಹಣವನ್ನು ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ ನೆರವೇರಿಸಿದರು. ಪರಿಷತ್ತಿನ ಧ್ವಜಾರೋಹಣವನ್ನು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ನೆರವೇರಿಸಿದರು. ಸಮ್ಮೇಳನದ ಧ್ವಜಾರೋಹಣವನ್ನು ಉಜಿರೆ ಜುಮ್ಮಾ ಮಸೀದಿಯ ಮುಖ್ಯ ಗುರುಗಳಾಗಿರುವ ಅಬೂ ಸುಫಿಯಾನ್ ಹೆಚ್.ಐ ಇಬ್ರಾಹಿಂ ಮದನಿ ನೆರವೇರಿಸಿದರು. ವಿಧಾನ ಪರಿಷತ್‌ನ ಸದಸ್ಯರಾಗಿರುವ ಕ್ಯಾ| ಗಣೇಶ್ ಕಾರ್ಣಿಕ್ ವಿಶೇಷ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ರಾಷ್ಟ್ರಗೀತೆ ಮತ್ತು ಧ್ವಜಗೀತೆಯನ್ನು ವಾಣಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ| ಬಿ.ಯಶೋವರ್ಮ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾಯಾಧ್ಯಕ್ಷರಾಗಿರುವ ಪ್ರತಾಪಸಿಂಹ ನಾಯಕ್, ಕಾರ್ಯದರ್ಶಿಗಳಾಗಿರುವ ಡಾ| ಎಂ.ಎಂ ದಯಾಕರ್, ಹಾಗೂ ಉಪಾಧ್ಯಕ್ಷರುಗಳು ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಾ| ಎಂ.ಪಿ ಶ್ರೀನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿಗಳಾದ ರಾಮಕೃಷ್ಣ ಚೊಕ್ಕಾಡಿ ಮತ್ತು ಅಶ್ರಫ್ ಆಲಿಕುಂಞಿ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.