HomePage_Banner_
HomePage_Banner_
HomePage_Banner_

ಬದ್ಯಾರ್ ಫ್ರೆಂಡ್ಸ್ ಪುರುಷರ ಹಗ್ಗಜಗ್ಗಾಟ

Advt_NewsUnder_1

badyar friends 1 copy

badyar friends copy

ಬದ್ಯಾರ್ : ಬದ್ಯಾರ್ ಫ್ರೆಂಡ್ಸ್ ವತಿಯಿಂದ ನಡೆದ ಪ್ರಥಮ ವರ್ಷದ ತಾಲೂಕು ಮಟ್ಟದ ಪುರುಷರ 550 ಕೆಜಿ ವಿಭಾಗದ(8+1) ಗ್ರಿಪ್ಸ್ ಹಗ್ಗ ಜಗ್ಗಾಟವು ಜ.21ರಂದು ಸಂಜೆ ಗಂಟೆ 7ಕ್ಕೆ ಬದ್ಯಾರ್ ಕ್ರೀಡಾಂಗಣದಲ್ಲಿ ಬದ್ಯಾರ್ ಸಂತ ರಫಾಯಲ್ ಚರ್ಚಿನ ಧರ್ಮಗುರುಗಳಾದ ವಂ| ಫಾ| ವಿಲ್ಫ್ರೆಡ್ ಗೋನ್ಸಾಲ್ವಿಸ್ ಇವರು ಉದ್ಘಾಟಿಸಿ ಶುಭ ಹಾರೈಸಿದರು.
ಅಧ್ಯಕ್ಷರಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಯೋಗೀಶ್ ಕುಮಾರ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಡಂಗಡಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್ ಹಾಗೂ ಸದಸ್ಯರಾದ ಮೆಕ್ಸಿಂ ಸಿಕ್ವೇರಾ, ಹಾಮೋದ್ ಭಾವಾ, ಬದ್ಯಾರ್ ಚರ್ಚಿನ ಉಪಾಧ್ಯಕ್ಷರಾದ ರಫಾಯಲ್ ವೇಗಸ್ ಭಾಗವಹಿಸಿದ್ದರು.
ಸಮಾರೋಪ ಕಾರ‍್ಯಕ್ರಮದ ಅಧ್ಯಕ್ಷ ಪುಷ್ಪರಾಜ್ ಜೈನ್ ಬದ್ಯಾರ್ ಹಾಗೂ ಮುಖ್ಯ ಅತಿಥಿಗಳಾಗಿ ಗುರುರಾಜ್ ಹೆಗ್ಡೆ ಪೆರಾಲ್ದ ಕಟ್ಟೆ, ಗಂಗಾಧರ್ ಸಾಲ್ಯಾನ್ ನಾಗಶ್ರೀ ಇಂಡಸ್ಟ್ರೀಸ್ ಬರಾಯ ಇವರು ಉಪಸ್ಥಿತರಿದ್ದರು. ಈ ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ.5017/- ಮತ್ತು ಫ್ರೆಂಡ್ಸ್ ಬದ್ಯಾರ್ ಟ್ರೋಫಿಯನ್ನು ಯುವಶಕ್ತಿ ಓಡಿಲ್ನಾಳ-ಎ, ದ್ವಿತೀಯ ಬಹುಮಾನವಾಗಿ ರೂ.4017/- ಮತ್ತು ಫ್ರೆಂಡ್ಸ್ ಬದ್ಯಾರ್ ಟ್ರೋಫಿಯನ್ನು ಸಿದ್ಧಿ ವಿನಾಯಕ ಭಜನಾ ಮಂಡಳಿ ಕುತ್ತಿನ, ತೃತೀಯ ಬಹುಮಾನವಾಗಿ ರೂ.3017/- ಮತ್ತು ಫ್ರೆಂಡ್ಸ್ ಬದ್ಯಾರ್ ಟ್ರೋಫಿಯನ್ನು ಯುವಶಕ್ತಿ ಓಡಿಲ್ನಾಲ ಡಿ ಮತ್ತು ಚತುರ್ಥ ಬಹುಮಾನವಾಗಿ ರೂ.2017/- ಮತ್ತು ಫ್ರೆಂಡ್ಸ್ ಬದ್ಯಾರ್ ಟ್ರೋಫಿಯನ್ನು ಓಡಿಲ್ನಾಳ-ಬಿ ಇವರು ಪಡೆದುಕೊಂಡರು.
ಕಾರ‍್ಯಕ್ರಮವನ್ನು ರವಿ ಗೋವಿಯಸ್ ಹಾಗೂ ಜೆರಾಲ್ಡ್ ಡಿಸೋಜಾ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.