HomePage_Banner_
HomePage_Banner_
HomePage_Banner_

ಕ್ರೀಡೆ ಶಿಸ್ತನ್ನು ಬೆಳೆಸುವ ಚಟುವಟಿಕೆ: ಕೇಶವ ಬಂಗೇರ

Advt_NewsUnder_1

nala temple varshikosava cricket copyಕ್ರೀಡೆಯು ಮಾನವನಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಸಹಕಾರಿಯಾದುದು. ನಮ್ಮ ದೇಶದಲ್ಲಿ ಭ್ರಷ್ಟಾಚಾರದಂತಹ ಸಾಮಾಜಿಕ ಪಿಡುಗುಗಳು ತಾಂಡವವಾಡುತ್ತಿದ್ದು, ಯುವಜನತೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ವಾತಾವರಣವನ್ನು ಸೃಷ್ಠಿಸಿ, ಉತ್ತಮ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಬೇಕು.
– ವಸಂತ್ ಮಜಲ್, ಅಧ್ಯಕ್ಷರು, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಜಾತ್ರೋತ್ಸವದಂದು ಬಹುಮಾನ ವಿತರಣೆ
ಕ್ರಿಕೇಟ್ ಪಂದ್ಯಾಟಕ್ಕೆ ಒಟ್ಟು 20 ತಂಡಗಳು ಭಾಗವಹಿಸಿದ್ದು, ಪಂಚದುರ್ಗಾ ಕಕ್ಕೆಪದವು ತಂಡ ಪ್ರಥಮ ಸ್ಥಾನ ಹಾಗೂ ಮಾಣಿಕ್ಯ ಕ್ರಿಕೆಟ್ ಟೀಮ್ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಜ.27ರಂದು ನಡೆಯಲಿರುವ ಜಾತ್ರೋತ್ಸದ ಸಭಾ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ ಎಂದು ಲೋಕಲ್ ಬಾಯ್ಸ್ ವೀರಕೇಸರಿ ನಾಳ ಅಧ್ಯಕ್ಷ ಸದಾಶಿವ ಗಾಣಿಗ ತಿಳಿಸಿದ್ದಾರೆ.

ನಾಳ : ಕ್ರೀಡೆ ಎಂಬುದು ಮನುಷ್ಯನ ಜೀವನದಲ್ಲಿ ಶಿಸ್ತನ್ನು ಬೆಳೆಸುವ ಒಂದು ಉತ್ತಮ ಚಟುವಟಿಕೆ. ಮಾನವನು ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬದುಕ ಬೇಕಾದರೆ ಕ್ರೀಡೆಯು ಬಹಳ ಮುಖ್ಯವಾದುದು. ಸಮಾಜದಲ್ಲಿ ಯುವಜನತೆ ಸಮರ್ಪಕವಾಗಿ ಕರ್ತವ್ಯವನ್ನು ನಿರ್ವಹಿಸಬೇಕಾದರೆ, ಬುದ್ದಿವಂತಿಕೆಯೊಂದಿಗೆ ದೈಹಿಕ ಸಾಮಾರ್ಥ್ಯವೂ ಅತಿ ಅಗತ್ಯ ಎಂದು ಎಬಿವಿಪಿ ರಾಜ್ಯ ಉಪಾಧ್ಯಕ್ಷ ಕೇಶವ ಬಂಗೇರ ಹೇಳಿದರು.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಾಳ ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಲೋಕಲ್ ಬಾಯ್ಸ್ ವೀರಕೇಸರಿ ನಾಳ ಇದರ 10ನೇ ವರ್ಷದ ಸ್ಥಾಪನಾ ಸವಿನೆನಪಿಗಾಗಿ ದೇವಳದ ರಥಗದ್ದೆಯಲ್ಲಿ ನಡೆದ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ರಾಘವೇಂದ್ರ ಅಸ್ರಣ ಮಾತನಾಡಿ, ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ, ಯಶಸ್ಸು ಕಾಣಲು ಸಾಧ್ಯ ಎಂದರು.
ಲೋಕಲ್ ಬಾಯ್ಸ್ ವೀರಕೇಸರಿ ನಾಳ ಇದರ ಅಧ್ಯಕ್ಷ ಸದಾಶಿವ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಸಂತ್ ಮಜಲ್, ಕಳಿಯ ಗ್ರಾಮ ಪಂಚಾಯಿತಿ ಸದಸ್ಯ ಸುಧಾಕರ ಮಜಲ್, ಲೋಕಲ್ ಬಾಯ್ಸ್ ವೀರಕೇಸರಿ ಉಪಾಧ್ಯಕ್ಷ ಸುನೀಲ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಓಬಯ್ಯ ತಿಮನೊಟ್ಟು ಉಪಸ್ಥಿತರಿದ್ದರು. ಲೋಕಲ್ ಬಾಯ್ಸ್ ಕಾರ್ಯದರ್ಶಿ ಕಿರಣ ಸ್ವಾಗತಿಸಿದರು, ರವಿಕಿರಣ್ ವಂದಿಸಿದರು, ಪ್ರಥಮ್ ಶೆಟ್ಟಿ ರಾಯಿಮಾರ್ ಕಾರ್ಯಕ್ರಮ ನಿರೂಪಿ ಸಿದರು. – ಶ್ರವಣ್ ಕುಮಾರ್ ನಾಳ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.