HomePage_Banner_
HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ಅತ್ಯಾಧುನಿಕ ಮಾದರಿ ಸೌಕರ್ಯವಿರುವ ನಿವೇಶನ, ಲೀಲಾವತಿ ಎನ್ಕ್ಲೇವ್ ಶುಭಾರಂಭ

3

4

5

6

7

8

9

10

11

1

2

ಸುಸಜ್ಜಿತ ಅತ್ಯಾಧುನಿಕ ಸೌಲಭ್ಯ
ಲೀಲಾವತಿ ಎನ್ಕ್ಲೇವ್ ವಿವಿಧ ಅತ್ಯಾಧುನಿಕ ಮಾದರಿಯ ವೈಶಿಷ್ಟ್ಯತೆಗಳಿಂದ ಕೂಡಿದ್ದು, ಸ್ವಿಮ್ಮಿಂಗ್ ಫೂಲ್, ಯುರೋಪಿಯನ್ ಉಪಕರಣಗಳಿಂದ ನಿರ್ಮಾಣ ಮಾಡಿದ ಮಕ್ಕಳ ಪ್ಲೇ ಸ್ಟೇಷನ್, ಪಾರ್ಟಿಹಾಲ್, ಫಿಟ್‌ನೆಸ್ ಪಾರ್ಕ್ ಜಿಮ್, ೫೦,೦೦೦ ಲೀಟರ್‌ನ ನೀರಿನ ಸೌಲಭ್ಯ ಹೊಂದಿರುವ ಟ್ಯಾಂಕ್, ಎಲೆಕ್ಟ್ರಿಕಲ್, ಟೆಲಿಫೋನ್, ಕೇಬಲ್ ಸೆಂಟರ‍್ಸ್, ಸುಂದರವಾದ ಲ್ಯಾಂಡ್‌ಸೇಪ್, ವಿವಿಧ ಬಗೆಯ ಹಣ್ಣಿನ ಗಿಡಗಳು, ಸೋಲಾರ್ ಬಿಸಿ ನೀರು ಸೌಲಭ್ಯ, ಅಲ್ಲದೆ ವಿಶೇಷವಾಗಿ ಪರಿಸರಕ್ಕೆ ಒತ್ತು ನೀಡಿದ್ದು, ಪರಿಸರ ಪ್ರೇಮಿ ವಾತಾವರಣ ನಿರ್ಮಾಣ, ಮೂಲಭೂತ ಸೌಕರ್ಯದೊಂದಿಗೆ ಸೋಲಾರ್ ನಿರ್ಮಾಣ, ವೇಸ್ಟೇಜ್‌ನಿಂದ ಕಾಂಪೋಸ್ಟ್ ಗೊಬ್ಬರ ಮಾಡುವುದು ಇತ್ಯಾದಿ.

ಬೆಳ್ತಂಗಡಿ : ಬೆಳೆಯುತ್ತಿರುವ ಬೆಳ್ತಂಗಡಿ ನಗರಕ್ಕೆ ಅತ್ಯಂತ ಆಕರ್ಷಕ ಹಾಗೂ ಆಧುನಿಕ ಶೈಲಿಯಲ್ಲಿ ಸುಂದರ ವಿನ್ಯಾಸದೊಂದಿಗೆ ಬೆಳ್ತಂಗಡಿ ಸಂತೆಕಟ್ಟೆ ಜೂನಿಯರ್ ಕಾಲೇಜು ಹತ್ತಿರ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಕರ್ಯಗಳಿರುವ ಲೇಔಟ್ ಲೀಲಾವತಿ ಎನ್ಕ್ಲೇವ್ ಇದರ ಶುಭಾರಂಭವು ಜ.22ರಂದು ನಡೆಯಿತು.
ಬೆಳ್ತಂಗಡಿ ನಗರ ಇನ್ನಷ್ಟು ಸುಂದರವಾಗಿ ಬೆಳೆಯುತ್ತಿದೆ. ಯೋಜನಾಬದ್ಧವಾಗಿ ನಗರದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಉದ್ಯಮಿ ಜಿತೇಂದ್ರ ಸುವರ್ಣರವರು ಬೆಳ್ತಂಗಡಿಯ ಸುಂದರ ನಗರಕ್ಕೆ ಹಿರಿಮೆಯ ಗರಿಯನ್ನು ನೀಡುವ ಯೋಜನೆ ರೂಪಿಸಿದ್ದಾರೆ. ಪ್ರಕೃತಿ ರಮಣೀಯ ಸುಂದರ ಪರಿಸರದಲ್ಲಿ ಸೈಟ್‌ಗಳು ನಿರ್ಮಾಣಗೊಳ್ಳುತ್ತಿದ್ದು ವಿದೇಶ ಉಪಕರಣಗಳನ್ನು, ಆಧುನಿಕ ಸೌಲಭ್ಯಗಳನ್ನು ಇಲ್ಲಿ ಅಳವಡಿಸಲಾಗಿದೆ. ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಮಾದರಿ ಲೇಔಟ್ ನಿರ್ಮಾಣವಾಗಿದೆ. ಬೆಳ್ತಂಗಡಿ ಶಾಸಕರು, ಸಣ್ಣ ಕೈಗಾರಿಕಾ ನಿಗಮದ ಅಧ್ಯಕ್ಷರು ಆಗಿರುವ ಕೆ.ವಸಂತ ಬಂಗೇರ ಉದ್ಘಾಟನೆಯನ್ನು ನೆರವೇರಿಸಿದರು. ಕೇರಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಹಾಗೂ ಹೋಲಿ ರೆಡೀಮರ್ ಚರ್ಚಿನ ಧರ್ಮಗುರು ಬೊನವೆಂಚರ್ ನಜ್ರೆತ್‌ರವರು ಆರ್ಶೀವಚನ ನೀಡಿದರು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಭಗೀರಥ ಜಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ರಘುರಾಮ ಶೆಟ್ಟಿ, ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಸೋಮೇಗೌಡ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಭಟ್, ನಗರ ಪಂಚಾಯತ್ ಸದಸ್ಯೆ ಕವಿತಾ ಸದಾನಂದ, ಬೆಳ್ತಂಗಡಿ ಜೈನ್ ಮಿಲನ್‌ನ ಅಧ್ಯಕ್ಷ ಧನಕೀರ್ತಿ ಆರಿಗ, ಖಿಲ್‌ರ್ ಜುಮ್ಮಾ ಮಸೀದಿ ಬೆಳ್ತಂಗಡಿ ಅಧ್ಯಕ್ಷ ಬಿ.ಎ ನಝೀರ್, ನಗರ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹೆಚ್ಚಿನ ಮಾಹಿತಿಗಾಗಿ www.leelavathienclave.com ಸಂಪರ್ಕಿಸಬಹುದು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.