ಕೊಯ್ಯೂರು ಡೆಂಬುಗದಲ್ಲಿ ಜ. 22ರಂದು ಗೌಡರ ಸಮಾವೇಶ

Advt_NewsUnder_1
Advt_NewsUnder_1

  ಕೊಯ್ಯೂರು: ಗ್ರಾಮದ ಡೆಂಬುಗ ರಾಮಣ್ಣ ಗೌಡರ ಮನೆಯಲ್ಲಿ ಜನವರಿ 22ರಂದು ಆದಿತ್ಯವಾರ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಸಮಾವೇಶ ಮತ್ತು ಮಹಾಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರಾದ ಡಾ. ಯು. ಪಿ. ಶಿವಾನಂದ ಮತ್ತು ಪ್ರಧಾನ ಉಪನ್ಯಾಸಕರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಹೆಚ್. ಡಿ. ಪ್ರಶಾಂತ್ ಭಾಗವಹಿಸಲಿದ್ದಾರೆಂದು ಸಂಘದ ಅಧ್ಯಕ್ಷೆ ಶ್ರೀಮತಿ ಗೀತಾ ರಾಮಣ್ಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಶೇಷ ರಸಪ್ರಶ್ನೆ ಸ್ಪರ್ಧೆಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿರಿಯ ಕೃಷಿಕರಾದ ಬೆರ್ಕೆ ವೀರಪ್ಪ ಗೌಡ ಮತ್ತು ಮಂಗಳೂರಿನ ಕೆಎಂಎಫ್‌ನಲ್ಲಿ ಸಹಾಯಕ ಪ್ರಬಂಧಕರಾಗಿರುವ ಕಾರ್ತಿಕ್ ಗೌಡ ಪಾಂಬೇಲು ಅವರುಗಳನ್ನು ಸನ್ಮಾನಿಸುವ ಕಾರ್ಯಕ್ರಮವೂ ಇದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.