ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಶ್ವಾಸಕೋಶ ತಪಾಸಣಾ ಶಿಬಿರ

  ಉಜಿರೆ : ಜ. 21 ರಂದು ಬೆಳಿಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 1.00 ವರೆಗೆ ತಜ್ಞ ವೈದ್ಯರಾದ ಡಾ| ಲೋಕೇಶ್ ಕುಮಾರ್ ಹಾಗೂ ಡಾ| ಸಾತ್ವಿಕ್ ಜೈನ್ ಇವರ ನೇತೃತ್ವದಲ್ಲಿ ಉಚಿತ ಶ್ವಾಸಕೋಶ ತಪಾಸಣಾ ಶಿಬಿರ ನಡೆಯಲಿದೆ.
ಉಸಿರಾಡಲು ಕಷ್ಟಪಡುವುದು, ಪದೇ-ಪದೇ ಕಾಣಿಸಿಕೊಳ್ಳುವ ಕೆಮ್ಮು ಅಥವಾ ದಮ್ಮು, ಎದೆ ಬಿಗಿತದಿಂದ ಉಬ್ಬಸ ಹಾಗೂ ಕೆಮ್ಮು, ಹೊಗೆ, ಧೂಳು, ತಂಪುಪಾನೀಯ, ವಾತಾವರಣದಲ್ಲಿ ಏರುಪೇರಿನೊಂದಿಗೆ ಅಲರ್ಜಿ ಅಥವಾ ಕೆಮ್ಮು, ಉಬ್ಬಸ ಕಾಣಿಸಿಕೊಳ್ಳುವುದು, ಮೂಗು ಕಟ್ಟಿದಂತಾಗುವುದು, ಕಣ್ಣು ಕೆಂಪಾಗುವುದು ಇತರ ಶ್ವಾಸಕೋಶಗಳ ತೊಂದರೆಗಳಿರುವವರು ಈ ಶಿಬಿರದ ಪ್ರಯೋಜನ ಪಡೆಯಬಹುದು. ಶಿಬಿರದಲ್ಲಿ ಉಚಿತವಾಗಿ ರೋಗ ತಪಾಸಣೆ ನಡೆಸಲಾಗುವುದು. ಮಾಹಿತಿಗಾಗಿ 08256-237611/615 ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿ ಎನ್. ಮನ್ಮಥ್ ಕುಮಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.