5 ಅಂಗನವಾಡಿ ಕಾರ್ಯಕರ್ತೆ 17 ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1

  ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 5 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ 17 ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಫೆ.4 ಕೊನೆ ದಿನವಾಗಿದೆ. 18ವರ್ಷದಿಂದ 35 ವರ್ಷದೊಳಗಿನ ಸ್ಥಳೀಯರು ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆ ಹುದ್ದೆಗೆ ಎಸ್ಸೆಸ್ಸೆಲ್ಸಿ ಹಾಗೂ ಸಹಾಯಕಿಯರ ಹುದ್ದೆಗೆ 4ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.
ಅಂಗನವಾಡಿ ಕಾರ್ಯಕರ್ತೆ- ಪೊಸಳಿಕೆ ಧರ್ಮಸ್ಥಳ, ಉಪ್ಪಾರ ಪಳಿಕೆ ಕೊಕ್ಕಡ, ಸುರುಳಿ ಬೆಳಾಲು, ನೆಲ್ಲಿಂಗೇರಿ ಅಂಡಿಂಜೆ (ಎಲ್ಲಾ ಸಾಮಾನ್ಯರಿಗೆ) ಮಾಪಲ ಉಜಿರೆ(ಪ. ಪಂಗಡ). ಅಂಗನವಾಡಿ ಸಹಾಯಕಿಯರು- ಬಂದಾರು ಶಾಲೆ, ಬಂಗಾಡಿ-2, ಬಂಗಾಡಿ-1, ಹುಪ್ಪ ಪಾರೆಂಕಿ, ಕಂಚಿಮಾರು ಧರ್ಮಸ್ಥಳ, ತೆಕ್ಕಾರು ಮಸೀದಿ, ಸರಳೀಕಟ್ಟೆ ತೆಕ್ಕಾರು, ಪೆರ್ಲ ಶಿಬಾಜೆ, ಪಟ್ರಮೆ ಎ., ಬೊಟ್ಟಿಲ್‌ಮಾರ್ ಕರಂಬಾರು, ದರ್ಖಾಸು ಕೊಯ್ಯೂರು, ಬಜಿಲ ಕೊಯ್ಯೂರು, ಕಕ್ಕೆಜಾಲು ಉಜಿರೆ, ಉಜಿರೆ, ಸುರುಳಿ ಬೆಳಾಲು, ಕೊಳಾಲ ಮುಗೇರಡ್ಕ ಗರ್ಡಾಡಿ (ಎಲ್ಲಾ ಸಾಮಾನ್ಯರಿಗೆ) ಮಾಪಲ ಉಜಿರೆ (ಪ.ಪಂಗಡ). ಹೆಚ್ಚಿನ ಮಾಹಿತಿ ಮತ್ತು ವಿವರಕ್ಕಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಬೆಳ್ತಂಗಡಿ-೨೩೨೧೩೪ ಇವರನ್ನು ಸಂಪರ್ಕಿಸಬಹುದು ಎಂದು ಇಲಾಖಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.