ಕನ್ನಡಿಕಟ್ಟೆ ಸ್ವಲಾತ್ ವಾರ್ಷಿಕ, ಕಥಾಪ್ರಸಂಗ, ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

knnadi katte swalath varshikaಕನ್ನಡಿಕಟ್ಟೆ: ಮುಹ್ಯುದ್ದೀನ್ ಜುಮ್ಮಾ ಮಸೀದಿ ಕನ್ನಡಿಕಟ್ಟೆ ಇದರ ಅಂಗ ಸಂಸ್ಥೆಯಾದ ಗೌಸಿಯಾ ಯಂಗ್‌ಮೆನ್ಸ್ ವತಿಯಿಂದ 14 ನೇ ಸ್ವಲಾತ್ ವಾರ್ಷಿಕೋತ್ಸವ ಹಾಗೂ 3 ದಿನಗಳ ಕಥಾ ಪ್ರಸಂಗವು ವಿಜೃಂಬಣೆಯಿಂದ ಜರುಗಿತು.
ಸ್ವಲಾತ್ ನೇತೃತ್ವವನ್ನು ದಾರುಸ್ಸಲಾಂ ದಅವಾ ಕಾಲೇಜು ಬೆಳ್ತಂಗಡಿ ಇದರ ಚೇರ್‌ಮೆನ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಪೊಸೋಟ್ ವಹಿಸಿದ್ದರು. ಎಂ. ಎಚ್. ಆರ್ ಹಂಝ ಮುಸ್ಲಿಯಾರ್ ಪುತ್ತೂರು ಗಾಯಕರಾದ ಶಿಹಾಬುದ್ದೀನ್ ಅರಿಕ್ಕೋಡ್ ಕೇರಳ ಕಥಾಪ್ರಸಂಗ ನಡೆಸಿಕೊಟ್ಟರು. ಈ ಸಂದರ್ಭ ಕನ್ನಡಿಕಟ್ಟೆ ಮಸೀದಿಯ ಮಾಜಿ ಖತೀಬ್ ಬಶೀರ್ ದಾರಿಮಿಯವರನ್ನು ಸಯ್ಯಿದ್ ತಂಙಳ್ ಅವರು ಸನ್ಮಾನಿಸಿದರು. ಪ್ರಸ್ತುತ ಖತೀಬರಾಗಿರುವ ಕೆ. ಪಿ ಮುಹಮ್ಮದ್ ಹಸ್ವೀಫ್ ದಾರಿಮಿ ಉದ್ಘಾಟನೆ ನೆರವೇರಿಸಿದರು. ಮಸೀದಿ ಅಧ್ಯಕ್ಷ ಅಬ್ಬಾಸ್ ಪಜೆಮಾರ್, ಪಡಂಗಡಿ ಗ್ರಾ.ಪಂ ಸದಸ್ಯ ಹಾಮದ್ ಬಾವ, ಗೌಸಿಯಾ ಯಂಗ್‌ಮೆನ್ಸ್ ಗೌರವಾಧ್ಯಕ್ಷ ಹೈದರ್ ಬಿ ಮಾಸ್ಟರ್, ಅಧ್ಯಕ್ಷ ಮುಹಮ್ಮದ್ ಪಜೆಮಾರ್, ಕಾರ್ಯದರ್ಶಿ ಅಶ್ರಫ್ ಕನ್ನಡಿಕಟ್ಟೆ, ಸದರ್ ಮುಅಲ್ಲಿಮ್ ಅಬೂಬಕ್ಕರ್ ಸಿದ್ದೀಕ್ ಅಝ್‌ಹರಿ, ಪ್ರಮುಖರಾದ ಇ. ಕೆ ಬಶೀರ್ ವಗ್ಗ, ರಝಾಕ್ ರೆಡಿಮೆಡ್ ಕನ್ನಡಿಕಟ್ಟೆ, ಕೋಯ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್ ಕನ್ನಡಿಕಟ್ಟೆ, ಉಬೈದುಲ್ಲಾ ಮುಸ್ಲಿಯಾರ್ ಗೇರುಕಟ್ಟೆ ಮೊದಲಾದವರು ವೇದಿಕೆಯಲ್ಲಿದ್ದರು. ಸಿರಾಜ್ ಚಿಲಿಂಬಿ ಮದ್ದಡ್ಕ ವಂದಿಸಿದರು.
ಚಿತ್ರ: ಬಶೀರ್ ದಾರಿಮಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.