HomePage_Banner_
HomePage_Banner_

ಜ. 15: ವಿಕಲ ಚೇತನರ ಉಚಿತ ತಪಾಸಣೆ-ಫಲಾನುಭವಿಗಳ ಆಯ್ಕೆ

  ವೇಣೂರು : ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಿಕಲ ಚೇತನರ ಉಚಿತ ತಪಾಸಣೆ ಹಾಗೂ ಸಾಧನ ಸಲಕರಣೆಗಳ ವಿತರಣೆಗಾಗಿ ಫಲಾನುಭವಿಗಳ ಗುರುತಿಸುವಿಕೆಯ ಶಿಬಿರವು ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ಜ.15ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ ೧ರ ವರೆಗೆ ಜರಗಲಿದೆ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಭವಿಷ್ಯಕೀರ್ತಿ ತಿಳಿಸಿದ್ದಾರೆ.
ಶಿಬಿರದ ಪ್ರಯೋಜನ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್, ವಿಕಲಾಂಗ ತೋರುವ 6 ಫೊಟೊ ತರಬೇಕಾಗುತ್ತದೆ. ಶಿಬಿರದಲ್ಲಿ ವಿಕಲಚೇತನ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಸಾಧನ ಸಲಕರಣೆಗಳನ್ನು ನೀಡುವ ಸಲುವಾಗಿ ಫಲಾನುಭವಿಗಳ ಆಯ್ಕೆಯನ್ನು ಈ ಶಿಬಿರದಲ್ಲಿ ನಡೆಸಲಾಗುವುದು. ಈಗಾಗಲೇ ಚೀಟಿ ಹೊಂದಿರುವವರಿಗೆ ಮತ್ತೊಮ್ಮೆ ತಪಾಸಣೆಗೆ ಅವಕಾಶ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.