ರೋಟೋ ಲಾಯರ‍್ಸ್ ಚೆಸ್ ಪಂದ್ಯಾಟ ಉದ್ಘಾಟನೆ : ನಿರ್ಧಿಷ್ಟ ಗುರಿ-ಆತ್ಮವಿಶ್ವಾಸ ಚೆಸ್ ಆಟದಲ್ಲಿ ಮುಖ್ಯ : ಹೇಮಾವತಿ ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Chess copy  ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶಕ್ಕೆ ಚೆಸ್‌ನ್ನು ಪರಿಚಯಿಸಿದವರು ಬಾರ್ ಎಸೋಸಿಯೇಶನ್‌ನವರು, ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಅಂತರಾಷ್ಟ್ರೀಯ ಸ್ಪರ್ಧೆ ನಡೆದಿದೆ. ಮೂರನೇ ವರ್ಷದ ಪಂದ್ಯಾಟಕ್ಕೂ ಸರ್ಕಾರದಿಂದ ಒಂದು ಲಕ್ಷ ರೂ. ನೆರವು ಮಂಜೂರು ಗೊಳಿಸುವಲ್ಲಿ ಪ್ರಯತ್ನಿಸಿದ್ದೇನೆ       –ಶಾಸಕ ವಸಂತ ಬಂಗೇರ

ಉಜಿರೆ : ಚೆಸ್ ಮಕ್ಕಳಲ್ಲಿ ಬುದ್ಧಿ, ಭಾವ ಮತ್ತು ಮೆದುಳಿನ ಸಶಕ್ತತೆಯನ್ನು ಉದ್ದೀಪನ ಗೊಳಿಸುವ ಕೆಲಸ ಮಾಡುತ್ತದೆ. ನಿರ್ಧಿಷ್ಟ ಗುರಿ, ಆತ್ಮವಿಶ್ವಾಸ ಮತ್ತು ಉತ್ಸಾಹ ಇದ್ದರೆ ಸುಲಭದಲ್ಲಿ ಈ ಪಂದ್ಯಾಟದಲ್ಲಿ ಗೆಲುವನ್ನು ಸಾಧಿಸಬಹುದು ಎಂದು ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆಯವರು ಹೇಳಿದರು.
ಅವರು ಡಿ.24 ರಂದು ಬೆಳ್ತಂಗಡಿಯ ಶ್ರೀ ಧ.ಮಂ. ಕಲಾಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್, ವಕೀಲರ ಸಂಘ ಮತ್ತು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಲಾದ ‘ರೋಟೋ ಲಾಯರ‍್ಸ್ ಕಪ್’ ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಬಳಿಕ ಚೆಸ್‌ಪಟು ಶಬ್ದೀಕ್‌ವರ್ಮನೊಂದಿಗೆ ಆಟವಾಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಚೆಸ್ ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾದ ಆಟವಾಗಿದ್ದು, ಮಕ್ಕಳು ಬಾಲ್ಯದಲ್ಲಿ ಭವಿಷ್ಯದ ಬಗ್ಗೆ ಸುಂದರ ಕನಸು ಮತ್ತು ನಿರ್ದಿಷ್ಟ ಗುರಿಯನ್ನು ಕಲ್ಪಿಸಬೇಕಾದರೆ ಅವರಲ್ಲಿ ಭಾವನೆಯನ್ನು ಪ್ರೇರೆಪಿಸಬೇಕು. ಅದನ್ನು ನನಸಾಗಿ ಮಾಡಲು ನಿರಂತರ ಪ್ರಯತ್ನ ಮಾಡಬೇಕು. ಸಚಿನ್ ಕ್ರಿಕೆಟ್ ಜಗತ್ತಿನಲ್ಲಿ ಖ್ಯಾತಿಯನ್ನು ಪಡೆಯಲು ಇದೇ ಕಾರಣವಾಗಿದೆ ಎಂದು ತಿಳಿಸಿದರು. ಚೆಸ್ ನಮ್ಮ ಮೆದುಳನ್ನು ಚುರುಕುಗೊಳಿಸುವ ಆಟವಾಗಿದೆ. ಎದುರಾಳಿಯ ಪ್ರತಿ ನಡೆಗೆ ತಡೆ ಒಡ್ಡಿ ಗೆಲುವನ್ನು ಸಾಧಿಸುವ ಬುದ್ಧಿಮತ್ತೆ ಮತ್ತು ಆತ್ಮವಿಶ್ವಾಸ ಸ್ಪರ್ಧಾಳುಗಳಲ್ಲಿರಬೇಕು. ನಮ್ಮ ನಿಜ ಜೀವನದಲ್ಲಿಯೂ ಇದರ ಅನ್ವಯವಾಗುತ್ತದೆ. ವಕೀಲರುಗಳು ಬೌದ್ಧಿಕ ಜ್ಞಾನದ ಪ್ರತೀಕವಾದರೆ, ರೋಟರಿ ಕ್ಲಬ್ ಸದಸ್ಯರು ಸೇವೆಯ ಪ್ರತೀಕವಾಗಿದ್ದಾರೆ. ಉಭಯ ಸಂಘಟನೆಗಳು ಸೇರಿ ಜಾಗತಿಕ ಮಟ್ಟದ ಚೆಸ್ ಪಂದ್ಯಾಟ ಆಯೋಜಿಸಿರುವುದಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ ಶಾಸಕ ಕೆ. ವಸಂತ ಬಂಗೇರ ಮಾತನಾಡಿ ಬೆಳ್ತಂಗಡಿಯಂತಹ ಗ್ರಾಮೀಣ ಪ್ರದೇಶಕ್ಕೆ ಚೆಸ್‌ನ್ನು ಪರಿಚಯಿಸಿದವರು ಬಾರ್ ಎಸೋಸಿಯೇಶನ್‌ನವರು, ಕಳೆದ ಎರಡು ವರ್ಷಗಳಲ್ಲಿ ಇಲ್ಲಿ ಅಂತರಾಷ್ಟ್ರೀಯ ಸ್ಪರ್ಧೆ ನಡೆದಿದೆ. ಮೂರನೇ ವರ್ಷದ ಪಂದ್ಯಾಟಕ್ಕೂ ಸರ್ಕಾರದಿಂದ ಒಂದು ಲಕ್ಷ ರೂ. ನೆರವು ನೀಡುವುದಾಗಿ ಭರವಸೆ ನೀಡಿದರು. ಬೆಳ್ತಂಗಡಿಯ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಜಿ. ಅವರು ಮಾತನಾಡಿ ಇಲ್ಲಿ ಆಟವಾಡಿದ ಚೆಸ್ ಪಟುಗಳು ಗ್ರಾಂಡ್‌ಮಾಸ್ಟರ್, ಇಂಟರ್‌ನ್ಯಾಷನಲ್ ಮಾಸ್ಟರ್‌ಗಳಾಗಿ ಮಿಂಚಲಿ ಎಂದು ಶುಭ ಹಾರೈಸಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಜೈಶಂಕರ್ ಅವರು ಚೆಸ್ ಆಟದಿಂದ ಮಕ್ಕಳಲ್ಲಿ ಏಕಾಗ್ರತೆ, ಬೌದ್ಧಿಕ ಮಟ್ಟ ಹೆಚ್ಚುತ್ತದೆ ಎಂದು ಅಭಿಪ್ರಾಯ ಪಟ್ಟರು. ರೋಟರಿ ಜಿಲ್ಲಾ ಉಪರಾಜ್ಯಪಾಲ ಸಂತೋಷ ಶೆಟ್ಟಿ ಮಾತನಾಡಿ ಮನಸ್ಸಿನ ಸ್ವಾಸ್ಥ್ಯಕ್ಕೆ ಚೆಸ್ ಕ್ರೀಡೆ ಪ್ರೇರಣೆಯಾಗಿದೆ ಎಂದು ತಿಳಿಸಿದರು. ಅರ್ಜುನ ಪ್ರಶಸ್ತಿ ಪುರಸ್ಕೃತ ಆಟಗಾರ ಡಿ.ವಿ. ಪ್ರಸಾದ್, ಯುಕೆಸಿಎ ಬೆಂಗಳೂರಿನ ಉಪಾಧ್ಯಕ್ಷ ಜೆ. ರಾಘವೇಂದ್ರ ಶುಭ ಕೋರಿದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಅಗರ್ತ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಕಾರ್ಯದರ್ಶಿ ಶಿವಯ್ಯ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ. ಗೌಡ, ಕಾರ್ಯದರ್ಶಿ ಪ್ರೊ| ಪ್ರಕಾಶ್‌ಪ್ರಭು, ಪತ್ರಕರ್ತರ ಸಂಘದ ಅಧ್ಯಕ್ಷ ದೇವಿ ಪ್ರಸಾದ್, ಪಂದ್ಯಾಟದ ಸಂಚಾಲಕ ರತ್ನವರ್ಮ ಬುಣ್ಣು ಉಪಸ್ಥಿತರಿದ್ದರು. ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಶಾಸಕ ವಸಂತ ಬಂಗೇರರನ್ನು ಮೂರು ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು. ರಾಷ್ಟ್ರ ಮತ್ತು ಅಂತರಾಷ್ಟ್ರೀಯ ತೀರ್ಪುಗಾರರನ್ನು ಅಭಿನಂದಿಸಲಾಯಿತು. ಚೆಸ್ ಪಂದ್ಯಾಟ ಸಂಚಾಲನಾ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕೆ. ಪ್ರತಾಪಸಿಂಹ ನಾಯಕ್ ಸ್ವಾಗತಿಸಿದರು. ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ಎ. ಜಯಕುಮಾರ್ ಶೆಟ್ಟಿ ಹಾಗೂ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿ, ವಕೀಲರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಮಾರ್ ಅಗರ್ತ ಧನ್ಯವಾದವಿತ್ತರು. ಚೆಸ್ ಪಂದ್ಯಾಟದಲ್ಲಿ ಆಸ್ಟ್ರಿಯಾದ ಮೂರು ಮಂದಿ ಸೇರಿದಂತೆ ೩೦೦ ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.