ಐಸಿರಿ ಮನೆಯಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ : ಸಾಧಕರಿಗೆ ಸಮ್ಮಾನ-ಗೌರವಾರ್ಪಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

Yakshaganadalli sanmana copyಪಣೆಜಾಲು : ಇಲ್ಲಿಯ ಐಸಿರಿ ಮನೆ ವಠಾರದಲ್ಲಿ ಕೆ.ಎನ್. ಆನಂದ ಶೆಟ್ಟಿ ಕುಟುಂಬಸ್ಥರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಸೇವಾ ಬಯಲಾಟ ಮತ್ತು ಸಮ್ಮಾನ ಸಮಾರಂಭ ಡಿ.24ರಂದು ವೈಭವಪೂರ್ಣವಾಗಿ ಜರುಗಿತು.
ಸಮಾರಂಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಗಂಗಯ್ಯ ಶೆಟ್ಟಿ ಗೇರುಕಟ್ಟೆ ಮತ್ತು ಶ್ರೀಮತಿ ಕಮಲಾ ಗಂಗಯ್ಯ ಶೆಟ್ಟಿ ಮತ್ತು ಸಾರ್ಥಕ 50 ವರ್ಷದ ದಾಂಪತ್ಯ ಜೀವನ ನಡೆಸಿದ ಸವಿನೆನಪಿಗಾಗಿ ಆಯುರ್ವೇದಿಕ್ ವೈದ್ಯ ಡಾ| ಕೆ.ಜಿ. ಪಣಿಕ್ಕರ್ ಮತ್ತು ಶ್ರೀಮತಿ ಗೌರಿ ಜಿ. ಪಣಿಕ್ಕರ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ಮಜಲು ವಹಿಸಿ, ಆನಂದ ಶೆಟ್ಟಿ ಐಸಿರಿಯವರ ಸಾಮಾಜಿಕ ಸೇವೆ ಮತ್ತು ವಿನಯಶೀಲತೆ ಎಲ್ಲರಿಗೂ ಆದರ್ಶವಾಗಿದೆ. ನಾಳ ದೇವಸ್ಥಾನದ ಅಭಿವೃದ್ಧಿಯಲ್ಲಿ ಅವರು ಸಲ್ಲಿಸಿದ ಸೇವೆ ಅನನ್ಯ. ಅವರ ಕುಟುಂಬಸ್ಥರಿಗೆ ಇನ್ನಷ್ಟು ಇಂತಹ ಪುಣ್ಯ ಕಾರ್ಯ ಮಾಡುವ ಭಾಗ್ಯ ದೇವರು ಕರುಣಿಸಲಿ ಎಂದು ಹಾರೈಸಿದರು.
ಕುಂಟಿನಿ ಕುಟುಂಬದ ಯಜಮಾನ ಬಿ. ನಾರಾಯಣ ಶೆಟ್ಟಿ ಕುಂಟಿನಿ, ಶ್ರೀಮತಿ ಉಷಾ ಆನಂದ ಶೆಟ್ಟಿ, ಮಂಜಿತ್ ಶೆಟ್ಟಿ, ಅನುಷಾ ಎ. ಶೆಟ್ಟಿ ಉಪಸ್ಥಿತರಿದ್ದರು. ರಾಘವ ಹೆಚ್. ಗೇರುಕಟ್ಟೆ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ರಾಜೇಶ್ ಪೆರ್ಮುಡ ಸನ್ಮಾನ ಪತ್ರ ವಾಚಿಸಿದರು. ಕೆ.ಎನ್. ಆನಂದ ಶೆಟ್ಟಿ ಐಸಿರಿ ಸ್ವಾಗತಿಸಿ, ಬಹಳ ವರ್ಷಗಳಿಂದ ಕಟೀಲು ಮೇಳದ ಯಕ್ಷಗಾನ ಆಡಿಸುವ ನಮ್ಮ ಬಯಕೆ ಈಡೇರಿದೆ. ಜೊತೆಗೆ ಇಬ್ಬರು ಗಣ್ಯರಿಗೆ ಸನ್ಮಾನಿಸುವ ಯೋಜನೆಯೂ ಕೈಗೂಡಿದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಠಲ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು. ಈ ಪುಣ್ಯ ಕಾರ್ಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು, ಕಲಾಭಿಮಾನಿಗಳು ಭಾಗವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.