ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಚನೆ

ಬೆಳ್ತಂಗಡಿ : ಸರಕಾರಿ ಕಿರಿಯ/ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಹುದ್ದೆಗಳಿಗೆ ತಾಲೂಕು ಹಂತದಲ್ಲಿ ಎರಡು ಶಿಕ್ಷಕರನ್ನು ಕಾಯ್ದಿರಿಸಿಕೊಳ್ಳುವಂತೆ ಶಿಕ್ಷಣ ಆಯುಕ್ತರ ಆದೇಶದಂತೆ ಉಪನಿರ್ದೇಶಕರು ತಿಳಿಸಿರುತ್ತಾರೆ.
ಆದ್ದರಿಂದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಸಕ್ತ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತಮ್ಮನ್ನು ತಾಲೂಕಿನ ಯಾವ ಶಾಲೆಗೆ ಶಿಕ್ಷಕರ ಅವಶ್ಯಕತೆ ಇದೆಯೋ ಆ ಶಾಲೆಗೆ ತಮ್ಮನ್ನು ನಿಯೋಜಿಸಲಾಗುವುದು. ಹಾಗೂ ತಮ್ಮ ಬದಲಿಗೆ ಅತಿಥಿ ಶಿಕ್ಷಕರನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸುಭಾಷ್ ಜಾದವ್ ಶಿಕ್ಷಣ ಸಂಯೋಜಕರು ಇವರನ್ನು ಸಂಪರ್ಕಿಸುವುದು. (9741487626/9481594426)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.