ಭಾರತ ವಿಶ್ವ ಗುರುವಾಗಲು ಯುವಕರು ಸಂಘಟಿತರಾಗಬೇಕು : ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1

nala temple copyಬೆಳ್ತಂಗಡಿ : ಹಿಂದೂ ಸಮಾಜ, ಸಂಸ್ಕೃತಿಯ ನಾಶಕ್ಕೆ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ನಾವೆಲ್ಲ ಹಿಂದುಗಳೂ ಒಗ್ಗಟ್ಟಾಗಬೇಕು, ಹಿಂದು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡಬೇಕು ಎಂದು ನ್ಯಾಯವಾದಿ ಹರೀಶ್ ಪೂಂಜಾರವರು ನಾಳ ಹಿಂದೂ ಜಾಗೃತಿ ಸಮಾವೇಶದಲ್ಲಿ ಹೇಳಿದರು.
ಗೋಹತ್ಯೆ, ಮತಾಂತರ, ಭಯೋತ್ಪಾದನೆ ಇತ್ಯಾದಿ ಸಮಾಜ ವಿರೋಧಿ ಸವಾಲು ಮೆಟ್ಟಿ ನಿಲ್ಲಬೇಕಾದರೆ ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಯುವಕರ ಸಹಕಾರ ಅಗತ್ಯ. ಈ ಸಂಘಟನೆ ಹಿಂದೂ ಜಾಗೃತಿ ಕೆಲಸ ಮಾಡಬೇಕು. ಯುವ ಶಕ್ತಿಯಿಂದ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶ ಯುವ ಶಕ್ತಿಯ ಆಗರವಾಗಿದ್ದು, ಭಾರತ ವಿಶ್ವಗುರು ಆಗುವ ದೇಶ ಇನ್ನೊಮ್ಮೆ ನಿರ್ಮಾಣವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಹಿಂದೂ ಜಾಗೃತಿಯ ಸಮಿತಿ ಮಂಗಳೂರು ವಿಭಾಗದ ಚಂದ್ರಮೊಗೇರ ಮಾತನಾಡಿ, ಧರ್ಮಶಿಕ್ಷಣ ಕೊಡುವ ಕೆಲಸ ಮಾಡಬೇಕು. ಹಿಂದೂ ಸಮಾಜ ಬಹಳ ಸಂಕಷ್ಟದಲ್ಲಿದೆ ಎಂದರು. ವೇದಿಕೆಯಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ಸ್ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಬಿ, ರಾಮಣ್ಣ ಪೂಜಾರಿ ಕೋಟೆಗುತ್ತು, ಜನಾರ್ದನ ಪೂಜಾರಿ ಕಳಿಯ, ಆನಂದ ಶೆಟ್ಟಿ ಪಣೆಜಾಲು, ಸಂಚಾಲಕರಾದ ರಾಘವ ಹೆಚ್ ಉಪಸ್ಥಿತರಿದ್ದರು.
ರಾಘವ ಸ್ವಾಗತಿಸಿ, ಸತೀಶ್ ಆಚಾರ್ಯ ಧನ್ಯವಾದವಿತ್ತರು. ಸಂಜೆ ಕ್ರೀಡೋತ್ಸವ (ಕಬಡ್ಡಿ, ವಾಲಿಬಾಲ್) ಹಾಗೂ ಮಲ್ಲಕ್ಕನ ಇಲ್ಲೊಕ್ಕೆಲ್ ತುಳುನಾಟಕ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.