HomePage_Banner_
HomePage_Banner_

ರಾಷ್ಟ್ರಮಟ್ಟದಲ್ಲಿ ಮಿಂಚು ಹರಿಸಲಿದ್ದಾರೆ ಕಾಶಿಪಟ್ಣ ಸರ್ಕಾರಿ ಪ್ರೌಢಶಾಲೆ ಮಕ್ಕಳು

  kashipatna sports 1 copy kashipatna sports 2 copy kashipatna sports copyವಿದ್ಯಾರ್ಥಿಗಳಿಗೆ ತಂದೆ ತಾಯಿಯ ಆಶೀರ್ವಾದ, ಶಾಲಾ ಶಿಕ್ಷಕ ವೃಂದದ ಸಹಕಾರ, ಊರ ಜನರ ಬೆಂಬಲ, ವಿದ್ಯಾರ್ಥಿಗಳ ಪರಿಶ್ರಮ ಇವೆಲ್ಲವಿದ್ದರೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಸರ್ಕಾರಿ ಶಾಲೆಯ ಪ್ರತಿಯೊಬ್ಬ ಮಕ್ಕಳಲ್ಲಿ ವಿಶಿಷ್ಟ ಕ್ರೀಡಾಪಟುಗಳಿದ್ದಾರೆ. ದೈಹಿಕ ಶಿಕ್ಷಕರು ಅದನ್ನು ಗುರುತಿಸಿ ಅವರಿಗೆ ಸತತವಾಗಿ ತರಬೇತಿ ನೀಡಿದರೆ ಕ್ರೀಡೆಯಲ್ಲಿ ಎಲ್ಲರೂ ಸಾಧನೆ ಮಾಡಬಹುದು.
– ಸುಧಾಕರ್, ದೈಹಿಕ ಶಿಕ್ಷಣ ಶಿಕ್ಷಕ

ಈ ಶಾಲೆಯಲ್ಲಿ ಓದುವ ಹೆಚ್ಚಿನ ಮಕ್ಕಳು ಕೂಲಿ ಕಾರ್ಮಿಕರ ಮಕ್ಕಳೆ. ಇಂತಹ ಹಳ್ಳಿಯಿಂದ 5 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವುದು ವಿಶಿಷ್ಟ ಸಾಧನೆ. ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್ ನಿರಂತರ ತರಬೇತಿಯ ಫಲಶ್ರುತಿ. ವಿದ್ಯಾರ್ಥಿಗಳು ಇಂದು ಕಾಶಿಪಟ್ಣ ಊರಿನ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವುದು ಹೆಮ್ಮೆಯ ಸಂಗತಿ.
– ನಾರಾಯಣ, ಮುಖ್ಯೋಪಾಧ್ಯಾಯರು

 

ಕಾಶಿಪಟ್ಣ : ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವುದೇ ಹೆಚ್ಚು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಸರಿಯಾದ ಮೂಲ ಸೌಕರ್ಯಗಳೇ ಇರುವುದಿಲ್ಲ. ಈ ಮಧ್ಯೆ ಎಲ್ಲರನ್ನು ನಿಬ್ಬೇರಗಾಗುವಂತಹ ಸಾಧನೆಯನ್ನು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ದೈಹಿಕ ಶಿಕ್ಷಣವನ್ನು ಭೋದಿಸಿದ ಫಲಶ್ರುತಿಯಾಗಿ ಶಾಲೆಯ 5 ವಿದ್ಯಾರ್ಥಿಗಳಾದ ನಿತಿನ್, ಸಂದೀಪ್, ಝುನೈದ್, ಗಣೇಶ್, ಅಬ್ದುಲ್ ಶಿಫಾಝ್ ಸಾಹೇಬ್ ಅವರು ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಆಟವಾಡಲಿ ದ್ದಾರೆ. ಉತ್ತರ ಪ್ರದೇಶದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ರಾಷ್ಟ್ರಮಟ್ಟದಲ್ಲಿ ಕ್ರೀಡಾಕೂಟಕ್ಕೆ ಶಾಲೆಯ ದೈಹಿಕ ಶಿಕ್ಷಕ ಸುಧಾಕರ್ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಹಾಗೂ ಸಂಜೆ ತರಬೇತಿಯನ್ನು ನೀಡುತ್ತಿದ್ದಾರೆ. ಕೆಲವೊಂದು ಸಂದರ್ಭ ದಲ್ಲಿ ವಿದ್ಯಾರ್ಥಿಗಳಿಗೆ ಆದಿತ್ಯವಾರ, ಶನಿವಾರ ವಿಶೇಷ ತರಬೇತಿಯನ್ನು ತೆಗೆದುಕೊಳ್ಳಲಾಗುತ್ತದೆ. ಆಯ್ಕೆಯಾದ ಎಲ್ಲ ಮಕ್ಕಳು ಬಡ ಕುಟುಂಬದಿಂದಲೇ ಬಂದಿರುವವರು. ಇವರ ಈ ಅಪರೂಪದ ಸಾಧನೆಯನ್ನು ಇಡೀ ಊರಿನ ಜನರು ಮೆಚ್ಚಿಕೊಂಡಿದ್ದಾರೆ. ಇವರ ಸಾಧನೆಗೆ ಕಾಶಿಪಟ್ಣ ಶಾರದಾ ಮಹೋತ್ಸವ ಸಮಿತಿಯಿಂದ ಸನ್ಮಾನ, ಶಾಲಾ ಶಿಕ್ಷಕ ಹಾಗೂ ಎಸ್‌ಡಿಎಂ ಸದಸ್ಯರ ವತಿಯಿಂದ ಸನ್ಮಾನಗಳು ಇವರಿಗೆ ಸಂದಿವೆ.
ಶಾಲೆಗೆ ದಶಮಾನೋತ್ಸವದ ಸಂಭ್ರಮ : ಡಿಸೆಂಬರ್ 19ರಂದು ದಶಮಾನೋತ್ಸವ ಆಚರಿಸುತ್ತಿರುವ ಶಾಲೆ, ಇದೀಗ ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಸ್ಪರ್ಧೆ, ಕ್ರೀಡಾಕೂಟಕ್ಕೆ ಸಜ್ಜುಗೊಳ್ಳುತ್ತಿದ್ದಾರೆ. ಶಿಕ್ಷಕ ವೃಂದ, ಗ್ರಾಮ ಪಂಚಾಯಿತಿ ಹಾಗೂ ಊರಿನ ಜನರು ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಸಜ್ಜುಗೊಳ್ಳುತ್ತಿದ್ದಾರೆ. ಶಾಲೆ ಒಟ್ಟು 101 ಮಕ್ಕಳನ್ನು ಒಳಗೊಂಡಿದ್ದು ಪಾಠದ ಜತೆ ಪಠ್ಯೇತರ ಚಟುವಟಿಕೆಯಲ್ಲೂ ಮುಂಚೂನಿ ಯಲಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರು: ವಿಶೇಷವಾಗಿ ವಾಲಿಬಾಲ್ ಪಂದ್ಯಾಟದಲ್ಲಿ ಸತತ ಮೂರು ವರ್ಷದಿಂದ ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ಆಟವಾಡಿದ್ದಾರೆ. 2010-11ನೇ ಸಾಲಿನಲ್ಲಿ ಚಂದ್ರಿಕಾ, ಪ್ರಶಿಲ್ಲಾ, ಅಶ್ವಿನಿ, 2011-12ನೇ ಸಾಲಿನಲ್ಲಿ ಶ್ವೇತಾ ಹಾಗೂ 2013-14ನೇ ಸಾಲಿನಲ್ಲಿ ಶೃತೀಕಾ ಹಾಗೂ ಸೌಮ್ಯ ರಾಜ್ಯಮಟ್ಟದಲ್ಲಿ ಮಿಂಚಿದ್ದಾರೆ. ಅಥ್ಲೆಟಿಕ್ ವಿಭಾಗದಲ್ಲಿ ಸೌಜನ್ಯ, ಸುಮಲತಾ, ಮಮತಾ, ಶಿವರಾಜ್, ಮಧುಸೂಧನ ಜಿಲ್ಲಾ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಯೋಗಾಸನ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಸಂತೋಷ್ ಕೋಟ್ಯಾನ್, ಸುಜಿತ್, ರಂಜಿತ್, ಸುಮಂತ್ ಬಿ.ಜೆ ಜಿಲ್ಲೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಸಂಪ್ರಿಯ ವೈ.ಕೆ. ಕಾಶಿಪಟ್ಣ, ಚಿತ್ರಗಳು: ಪ್ರದೀಪ್.ಕೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.