ತಿಮ್ಮಣಬೆಟ್ಟು ಶಿಕ್ಷಕ ಸತೀಶ್ ಕುಮಾರ್ ಅವರಿಗೆ ಬೀಳ್ಕೊಡುಗೆ

Advt_NewsUnder_1
Advt_NewsUnder_1
Advt_NewsUnder_1

beelkodugeವೇಣೂರು: ತಿಮ್ಮಣಬೆಟ್ಟು ಸರ್ಕಾರಿ ಹಿ.ಪ್ರಾ. ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಮಂಗಳೂರಿನ ಮುಚ್ಚೂರು ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡಿರುವ ಸತೀಶ್ ಕುಮಾರ್ ಅವರ ಬೀಳ್ಕೊಡುಗೆ ಸಮಾರಂಭವು ಡಿ. 3ರಂದು ಜರಗಿತು. 5 ವರ್ಷ 5 ತಿಂಗಳುಗಳ ಕಾಲ ತಿಮ್ಮಣಬೆಟ್ಟು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಡುಕೋಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಘದ ನಿರ್ದೇಶಕ ಸಂಜೀವ ಶೆಟ್ಟಿ, ವೇಣೂರು ಯುವಜನ ಸೇವಾ ಸಂಘದ ಮಾಣಿಕ್ಯರಾಜ್ ಜೈನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆನಂದ, ಉಪಾಧ್ಯಕ್ಷೆ ಸುಧಾ, ಸದಸ್ಯರುಗಳಾದ ಯಶೋಧರ ಹೆಗ್ಡೆ, ಪುಷ್ಪಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಸಹ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪದಾಧಿಕಾರಿಗಳು ಸಹಕರಿಸಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುನಂದ ಪಿ. ಸ್ವಾಗತಿಸಿ ಗೌರವ ಶಿಕ್ಷಕಿ ಮಾಲತಿ ವಂದಿಸಿದರು. ಸಹ ಶಿಕ್ಷಕಿಯರಾದ ಸುಚಿತಾ ಡಿ ಸೋಜ ಮತ್ತು ಶುತಿ ನಿರೂಪಿಸಿದರು. ಪೋಷಕರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಚಿತ್ರ : ರಾಜ್ ಸ್ಟುಡಿಯೋ, ವೇಣೂರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.