ವೇಣೂರು: ಗ್ರಾ.ಪಂ. ಅನುದಾನದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

VNR  ವೇಣೂರು: ವೇಣೂರು ಗ್ರಾ.ಪಂ.ನ ಬಜಿರೆ ಪ್ರಥಮ ವಾರ್ಡ್‌ನ ಸ್ವಸ್ತಿಕ್ ನಗರದಲ್ಲಿ ಪಂಚಾಯತು ಅನುದಾನದಿಂದ ರೂ. 4.50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ ರಸ್ತೆ ಕಾಂಕ್ರಿಟೀಕರಣಕ್ಕೆ ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ, ಸದಸ್ಯರುಗಳಾದ ವಿಕ್ಟರ್ ಮಿನೇಜಸ್, ರಾಜೇಶ್ ಪೂಜಾರಿ, ವಿಎನ್ ಕುಲಾಲ್, ರೊನಾಲ್ಡ್ ಡಿ ಸೋಜ, ಲೀಲಾವತಿ ಆನಂದ, ಗಂಗಾಶೇಖರ್, ನರೇಗಾ ಇಂಜಿನಿಯರ್ ರುತೇಶ್, ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ, ಕಾರ್ಯದರ್ಶಿ ಲಕ್ಷ್ಮಿನಾರಾಯಣ ಆಚಾರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.