ಉಜಿರೆ : ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ ದಂತ ಮಹಾವಿದ್ಯಾಲಯ, ಕೆ.ವಿ.ಜಿ. ಆಯುರ್ವೇದ ಮಹಾವಿದ್ಯಾಲಯ ಸುಳ್ಯ ಇವರ ಸಹಯೋಗದೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ‘ಬೃಹತ್ ಆರೋಗ್ಯ ಮೇಳ’ ನ.27ರಂದು ಬೆಳಗ್ಗೆ 9.30ರಿಂದ 1 ಗಂಟೆಯವರೆಗೆ ಉಜಿರೆ ಜನಾರ್ದನ ಶಾಲೆ (ಎಸ್.ಡಿ.ಎಂ ಹಿ.ಪ್ರಾ ಶಾಲೆ ಉಜಿರೆ)ಯಲ್ಲಿ ನಡೆಯಲಿದೆ ಎಂದು ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಿಭಾಗ ಮುಖ್ಯಸ್ಥ ಡಾ| ಎಂ.ಎಂ ದಯಾಕರ್ ಹೇಳಿದರು. ಅವರು ನ.23ರಂದು ಬೆಳ್ತಂಗಡಿ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ಶಿಬಿರದಲ್ಲಿ ಜನರಲ್ ಮೆಡಿಸಿನ್ ವಿಭಾಗ, ಮಕ್ಕಳ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ನೇತ್ರ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಹರಿಗೆ ಮತ್ತು ಸ್ತ್ರೀ ರೋಗ ವಿಭಾಗ, ಶಸ್ತ್ರಚಿಕಿತ್ಸಾ ವಿಭಾಗ, ದಂತ ತಪಾಸಣೆ ಮತ್ತು ಚಿಕಿತ್ಸೆ ಮೊದಲಾದ ವಿಭಾಗಗಳಲ್ಲಿ ೭೫ ಮಂದಿ ವೈದ್ಯರು ಸೇರಿದಂತೆ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದ ಸೌಲಭ್ಯಗಳ ಚಿಕಿತ್ಸೆ ಬೇಕಾದಲ್ಲಿ ಆ ದಿನವೇ ಸುಳ್ಯಕ್ಕೆ ಹೋಗಿ-ಬರುವ ವ್ಯವಸ್ಥೆ ಮಾಡಲಾಗುವುದು, ಅಗತ್ಯವಿದ್ದಲ್ಲಿ ಮಧುಮೇಹ ಪರೀಕ್ಷೆ, ಇಸಿಜಿ ಕೂಡ ಮಾಡಲಾಗುವುದು. ಎಲ್ಲಾ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಲಹೆ ನೀಡಲಾಗುವುದು ಯಾರಿಗಾದರೂ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಮುಂದುವರಿಕಾ ಕಾರ್ಡ್ ನೀಡಲಾಗುವುದು ಕನಿಷ್ಠ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಉಜಿರೆಯಲ್ಲಿ ನಡೆಯುವ ಈ ಬೃಹತ್ ಆರೋಗ್ಯ ಮೇಳಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಉಜಿರೆ ಗ್ರಾ.ಪಂ ಪಿಡಿಒ ಗಾಂiiತ್ರಿ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಎಂ ಗೌಡ, ದ.ಕ ಜಿಲ್ಲಾ ಕ.ಸಾ.ಪ ಗೌ.ಕಾರ್ಯದರ್ಶಿ ಡಾ. ಶ್ರೀನಾಥ್ ಎಂ.ಪಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ ಕಾರ್ಯದರ್ಶಿ ನವೀನ್ ನೆರಿಯ, ಗ್ರಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಉಮೇಶ್ ಉಪಸ್ಥಿತರಿದ್ದರು.
ಹೆಚ್ಚಿನ ವಿವರಗಳಿಗೆ-9448167427, 9448558583, 9741036849 ಸಂಪರ್ಕಿಸಿ.