ಬೆಳ್ತಂಗಡಿ : ಮಹಿಳಾ ವೃಂದದಲ್ಲಿ ಮಕ್ಕಳ ದಿನಾಚರಣೆ

bdy mahila vrinda copy ಬೆಳ್ತಂಗಡಿ : ಮಹಿಳಾ ವೃಂದದ ಆಶ್ರಯದಲ್ಲಿ ನ.20ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕು| ಮೈಥಿಲಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮುಖ್ಯ ಅತಿಥಿಯಾಗಿ ಬಡಗಕಾರಂದೂರು ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಮಂಗಳಾ ರತ್ನಾಕರ್ ಮತ್ತು ಗಾಂಧಿನಗರ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಹಾಲಮ್ಮ ಸಿ ಹಾಗೂ ಮಹಿಳಾ ವೃಂದದ ಅಧ್ಯಕ್ಷೆ ನೇತ್ರ ಅಶೋಕ್, ಕಾರ‍್ಯದರ್ಶಿ ಪ್ರೀತಿ ಆರ್ ರಾವ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ನಡೆಸಲಾಯಿತು ಮತ್ತು ವಿಜೇತರಾವರಿಗೆ ಅಧ್ಯಕ್ಷೆ ಸ್ವರ್ಣಜೈನ್ ಮತ್ತು ಮುಖ್ಯ ಅತಿಥಿ ಅಂಜಲಿನ್ ಮತ್ತು ನಿರೂಪಕಿಯಾಗಿ ಶರಣ್ಯ ಎಸ್ ರಾವ್ ಬಹುಮಾನಗಳನ್ನು ವಿತರಿಸಿದರು.
ಅಭಿನಯ ಗೀತೆಯಲ್ಲಿ ಸಾಕ್ಷಿ ಹೆಗಡೆ(ಪ್ರ), ನಿತ್ಯ ಹೆಗಡೆ(ದ್ವಿ), ಉತ್ತರ ಲೇಖನದಲ್ಲಿ ಅಕ್ಷತಾ ಎಂ.ಎನ್(ಪ್ರ), ಚಿನ್ಮಯ್(ದ್ವಿ), ಘದ್ಮವೇಷದಲ್ಲಿ ಶ್ರೀಮಾ ಡಿ.ಕೆ(ಪ್ರ) ಪ್ರವಲ್ ರಾಜ್ ಜೈನ್(ದ್ವಿ), ಹಣ್ಣು, ಪ್ರಾಣಿ ತರಕಾರಿ ಗುರುತಿಸುವಿಕೆಯಲ್ಲಿ ಶ್ರೀ ರಕ್ಷಾ(ಪ್ರ), ಕೃತನ್(ದ್ವಿ), ಪಿಕ್ ಆಂಡ್ ಆಕ್ಟನಲ್ಲಿ ಅಪೇಕ್ಷಾ(ಪ್ರ), ಸ್ಪರ್ಶಾ ಜೈನ್(ದ್ವಿ), ರಸಪ್ರಶ್ನೆಯಲ್ಲಿ ತೇಜಸ್ವಿ ನಾರಾಯಣ್(ಪ್ರ), ಶ್ರೇಯಾ ಡೊಂಗ್ರೆ(ದ್ವಿ), ನೀಯತಿ ಕಥೆಯಲ್ಲಿ ಸಾಯಿ ಸಿಂಚನ ಬೇಕಲ್(ಪ್ರ), ಪ್ರವಲ್ ರಾಜ್ ಜೈನ್(ದ್ವಿ), ಚಿತ್ರಕಲೆಯಲ್ಲಿ ಅಕ್ಷತಾ(ಪ್ರ), ಪ್ರತೀಕ್(ದ್ವಿ), ಶೋಭಿತ್(ಸಮಧಾನಕರ), ತುಳು ಭಾಷಣ ಸ್ಪರ್ಧೆ (ಗ್ರಾಮೀಣ ಕ್ರೀಡೆಗಳು)ಯಲ್ಲಿ ಅಪೇಕ್ಷಾ ಎನ್.ಎಸ್(ಪ್ರ), ಸ್ಪರ್ಶಾ ಜೈನ್(ದ್ವಿ), ಬಹುಮಾನ ಪಡೆದಿರುತ್ತಾರೆ.
ಇದೇ ಮಕ್ಕಳ ವೇದಿಕೆಯಲ್ಲಿ ಪುಟಾಣಿ ಪಂಟ್ರು ಸ್ಪರ್ಧೆಯ ೨ನೇ ಫೈನಲಿಸ್ಟ್ ತೌಶೀರ್‌ನನ್ನು ಗುರುತಿಸಿ ಸನ್ಮಾನಿಸಲಾಯಿತು.
ಅತಿಥಿಗಳನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರ ಅಶೋಕ್ ಸ್ವಾಗತಿಸಿ, ಶ್ರೀಮತಿ ರೇಖಾ ಎಸ್.ರಾವ್ ನಿರೂಪಿಸಿದರು. ಮಹಿಳಾ ವೃಂದದ ಕಾರ್ಯದರ್ಶಿ ಪ್ರೀತಿ ಆರ್.ರಾವ್ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.