ಒರಿಸ್ಸಾದ ಪುರಿಯಲ್ಲಿ ನಡೆಯುವ ಸಿಐಟಿಯು ಸಮ್ಮೇಳನಕ್ಕೆ ತಾಲೂಕಿನಿಂದ ಇಬ್ಬರ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

newsಬೆಳ್ತಂಗಡಿ : ಒರಿಸ್ಸಾದ ಪುರಿಯಲ್ಲಿ ನವೆಂಬರ್ 26 ರಿಂದ 30ರ ತನಕ ನಡೆಯುವ ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ಸ್ ನ ಅಖಿಲ ಭಾರತ ಸಮ್ಮೇಳನಕ್ಕೆ ತಾಲೂಕಿನ ಇಬ್ಬರು ಆಯ್ಕೆಯಾಗಿದ್ದಾರೆ.
ಸಿಐಟಿಯುನ ತಾಲ್ಲೂಕು ಅಧ್ಯಕ್ಷ, ವೇಣೂರು ವಲಯ ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ಶಿವಕುಮಾರ್ ಎಸ್.ಎಂ ಮತ್ತು ಸಿಐಟಿಯು ನಾಯಕಿ, ವೇಣೂರು ವಲಯ ಬೀಡಿ ಕೆಲಸಗಾರರ ಸಂಘದ ಪ್ರ.ಕಾರ್ಯದರ್ಶಿ ಶ್ರೀಮತಿ ರೋಹಿಣಿ ಪೆರಾಡಿ ಬೆಳ್ತಂಗಡಿಯಿಂದ ಆಯ್ಕೆಗೊಂಡ ನಾಯಕರುಗಳಾಗಿದ್ದಾರೆ.
ಈ ಸಿಐಟಿಯು ಸಮ್ಮೇಳನದಲ್ಲಿ ಕಾರ್ಮಿಕ ವರ್ಗದ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆದು ಮುಂದಿನ ಚಳುವಳಿ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಇಡೀ ದೇಶದ ಕಾರ್ಮಿಕ ವರ್ಗಕ್ಕೆ ಹೊಸ ಚೈತನ್ಯ ನೀಡುವ ಕಾರ್ಯಕ್ರಮದಲ್ಲಿ ದೇಶದಾದ್ಯಂತದಿಂದ ಸಾವಿರಾರು ಕಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.