ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತ ಶ್ರವಣ ಸಾಧನ ವಿತರಣೆ, ಉಚಿತ ಶಸ್ತ್ರ ಚಿಕಿತ್ಸೆ ಪೂರ್ವಭಾವಿ ತಪಾಸಣಾ ಶಿಬಿರ

ಹೆಲ್ಪ್ ಇಂಡಿಯಾ ಫೌಂಡೇಶನ್ ತೊಕ್ಕೊಟ್ಟು ಮಂಗಳೂರು ಇದರ ಆಶ್ರಯದಲ್ಲಿ ಬಡತನ ರೇಖೆಯ ಕೆಳಗಿನ ಮಕ್ಕಳಿಗೆ 50 ಶ್ರವಣ ಸಾಧನ ವಿತರಣೆ ಕಾರ್ಯಕ್ರಮ ಹಾಗೂ ಯು.ಟಿ. ನಸೀಮಾ ಇನ್ಸ್‌ಟ್ಯೂಟ್ ಆಫ್ ಸ್ಪೀಚ್ ಎಂಡ್ ಹಿಯರಿಂಗ್ ಬೆಂಗಳೂರು ಇವರ ಸಹಕಾರದೊಂದಿಗೆ ಉಚಿತ ಶಸ್ತ್ರಚಿಕಿತ್ಸೆ ಪೂರ್ವ ತಯಾರಿ ತಪಾಸಣಾ ಶಿಬಿರ ಡಿ. 11 ರಂದು ಮಂಗಳೂರಿನ ಪುರಭವನದಲ್ಲಿ ಜರುಗಲಿದೆ ಎಂದು ತಾಲೂಕು ಪಂಚಾಯತ್ ಬೆಳ್ತಂಗಡಿಯ ಅಂಗವಿಕಲ ಪುನರ್ವಸತಿ ಕೇಂದ್ರದ ಸಂಯೋಜಕ ಜೋನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಆಲ್‌ಇಂಡಿಯಾ ಇಎನ್‌ಟಿ ಅಸೋಸಿಯೇಶನ್ ಅಧ್ಯಕ್ಷ ಡಾ| ದಿಲೀಪ್ ಹಲ್ದೀಪುರ್ ಅವರು ತಪಾಸಣೆ ನಡೆಸಲಿದ್ದು ಅರ್ಹರಿಗೆ ಸೌಲಭ್ಯ ಪಡೆಯಲು ಅರ್ಹತೆ ದಿಢೀಕರಿಸಲಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದವರು ಜೋನ್ ಅವರ ದೂರವಾಣಿ ಸಂಖ್ಯೆ 9480281513 ಯನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.