ಕಕ್ಕಿಂಜೆಯ ವಿ&ವಿ ಮಾರುತಿ ಸರ್ವಿಸ್ ಸ್ಟೇಷನ್ ಮಾಲಕ ಬಾಬುರಾಜ್‌ರಿಗೆ ‘ಎಮರ್ಜಿಂಗ್ ಸ್ಟಾರ್ ಅವಾರ್ಡ್’

v and v maruthi copyಕಕ್ಕಿಂಜೆ : ಮಾರುತಿ ಕಾರುಗಳ ಗ್ರಾಹಕರಿಗೆ ನೀಡಿದ ಅತ್ಯುತ್ತಮ ಸೇವೆಯನ್ನು ಗುರುತಿಸಿ ಕಕ್ಕಿಂಜೆಯ ವಿ&ವಿ ಮಾರುತಿ ಸರ್ವಿಸ್ ಸ್ಟೇಷನ್‌ನ ಮಾಲಕ ಬಾಬುರಾಜ್ ಅವರಿಗೆ ಮಾರುತಿ ಸುಝಿಕಿ ಮಂಗಳೂರಿನ ಮಾರೂರು ಮೋಟಾರ‍್ಸ್ ಸಂಸ್ಥೆಯವರು ‘ಎಮರ್ಜಿಂಗ್ ಸ್ಟಾರ್ ಅವಾರ್ಡ್-2016 ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಸಂಸ್ಥೆಯಿಂದ ಮಾರುತಿ ಕಾರುಗಳ ಒರ್ಜಿನಲ್ ಬಿಡಿ ಭಾಗಗಳನ್ನು ಖರೀದಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡಿದ ಅವರ ಕೌಶಲ್ಯತೆಯನ್ನು ಸಂಸ್ಥೆ ಗುರುತಿಸಿ ಈ ಪ್ರಶಸ್ತಿಯನ್ನು ನೀಡಿದೆ. ಮಂಗಳೂರಿನ ಹೋಟೆಲ್ ಕುಡ್ಲದಲ್ಲಿ ನ.16ರಂದು ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಮಾರುತಿ ಕಾರುಗಳ ಸರ್ವಿಸಿಂಗ್ ಮಾಲಕರ ಮೇಗಾ ಸಮ್ಮೇಳನದಲ್ಲಿ ಮಾರುತಿ ಸುಝಕಿಯ ರೀಜಿನಲ್ ಸ್ಪೇರ್‌ಪಾರ್ಟ್ ಮ್ಯಾನೇಜರ್ ವಿಕಾಸ್ ಝ ಮತ್ತು ಮಾರೂರು ಸಂಸ್ಥೆಯ ಮುಖ್ಯಸ್ಥ ಶಶಿಧರ ಪೈ ಅವರು ಬಾಬುರಾಜ್ ಮತ್ತು ಅವರ ಪತ್ನಿ ಜೆಸ್ಸಿ ಬಾಬುರಾಜ್‌ರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಕಳೆದ ಬಾರಿ ಇವರಿಗೆ ರೆಕೋಗ್ನೇಶನ್ ಅವಾರ್ಡ್-2015 ಪ್ರಶಸ್ತಿ ಲಭಿಸಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.