ಪುಂಜಾಲಕಟ್ಟೆ : 63ನೇ ಅಖಿಲ ಭಾರತ ಸಹಕಾರ ಸಪ್ತಾಹ-2016 ಮತ್ತು ಕಜೆಕಾರು ಸ.ವ್ಯ.ಸಂಘದ ನವೀಕೃತ ಕಛೇರಿ ಉದ್ಘಾಟನೆ

kajekaruಪುಂಜಾಲಕಟ್ಟೆ : 63ನೇ ಅಖಿಲ ಭಾರತ ಸಹಕಾರ ಸಪ್ತಾಹ-2016 ಮತ್ತು ಬಂಟ್ವಾಳ ತಾಲೂಕು ಬಡಗ ಕಜೆಜಾರು ಪಾಂಡವರಕಲ್ಲು ಕಜೆಕಾರು ಸಹಕಾರಿ ವ್ಯಾವಸಾಯಿಕ ಸಂಘಕ್ಕೆ ಸುಮಾರು 28.ಲ.ರೂ ವೆಚ್ಚದಲ್ಲಿ ನವೀಕೃತಗೊಂಡ ಕಛೇರಿ ಉದ್ಘಾಟನೆಯನ್ನು ಸಂಸದ ನಳೀನ್ ಕುಮಾರ್ ಕಟೀಲು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿ.ಸ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ವಹಿಸಿದ್ದರು. ಜಿ.ಪಂ ಸದಸ್ಯ ಎಂ.ತುಂಗಪ್ಪ, ಬಡಗಕಜೆಕಾರು ಗ್ರಾ.ಪಂ ಅಧ್ಯಕ್ಷ ಬಿ.ವಜ್ರ ಪೂಜಾರಿ, ಬಂಟ್ವಾಳ ಸಹಕಾರಿ ಯೂನಿಯನ್ ಅಧ್ಯಕ್ಷ ಜಿ.ಆನಂದ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ತ್ರಿವೇಣಿ, ಕಜೆಕಾರು ಸ.ವ್ಯ.ಸಂಘದ ಸಿಇಒ ಸರಸ್ವತಿ, ಉಪಾಧ್ಯಕ್ಷ ಕೆ.ಜಯಾ ಬಂಗೇರ, ನಿರ್ದೇಶಕರಾದ ಕೆ.ಡೀಕಯ್ಯ ಬಂಗೇರ, ದಿನೇಶ ಜೆಂಕ್ಯಾರು, ವಿಶ್ವನಾಥ ನಾಯ್ಕ, ಉಮರಬ್ಬ, ಸೀತಮ್ಮಾ, ರೋಹಿನಾಥ ಕೆ ಮತ್ತು ಜಯಾ ಕೆ, ಡಿಸಿಸಿ ಬ್ಯಾಂಕ್‌ನ ಪ್ರತಿನಿಧಿ ಕೇಶವ ಕಿಣಿ ಮತ್ತು ಸಿಬ್ಬಂದಿಒ ವರ್ಗ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಹೊನ್ನಪ್ಪ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.