ರೂ.2000ದ ನೋಟಲ್ಲಿ ಮೋದಿ ಭಾಷಣದ ವೀಡಿಯೋ ವದಂತಿ ನೋಟಿನ ಜೆರಾಕ್ಸ್ ಪ್ರತಿಯಲ್ಲೂ ಸಿಗುತ್ತೆ ಪ್ರಧಾನಿ ವೀಡಿಯೋ- ’ಮೋದಿಕೀ ನೋಟ್’

Advt_NewsUnder_1
Advt_NewsUnder_1
Advt_NewsUnder_1

modi1 copy

modi2 copy

ಬೆಳ್ತಂಗಡಿ:ರೂ.1000, 500ರ ನೋಟುಗಳನ್ನು ನಿಷೇಧಿಸಿದ ಬಳಿಕ ಜಾರಿಗೆ ತಂದಿರುವ ರೂ.2000ದ ಹೊಸ ನೋಟಲ್ಲಿ ಪ್ರಧಾನಿ ಮೋದಿಯವರ ಭಾಷಣದ ವೀಡಿಯೋ ಅಳವಡಿಸಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವರದಿಯಾಗಿದೆ. ಆದರೆ ೨ ಸಾವಿರದ ಅಸಲಿ ನೋಟು ಮಾತ್ರವಲ್ಲ ಆದರ ಜೆರಾಕ್ಸ್ ಪ್ರತಿ (ಕಪ್ಪು ಬಿಳುಪು ಕೂಡಾ)ಯಲ್ಲೂ ಮೋದಿಯವರ ಭಾಷಣದ ವೀಡಿಯೋ ಸಿಗುತ್ತಿದ್ದು ಇದು ಖಾಸಗಿ ಸಂಸ್ಥೆಯೊಂದರ ಮೊಬೈಲ್ ಆಪ್‌ನ ಗಿಮಿಕ್ ಎನ್ನುವುದು ಸ್ಪಷ್ಟವಾಗಿದೆ.
500 ಮತ್ತು 2000 ರೂಪಾಯಿಯ ಹೊಸ ನೋಟುಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದ ತಂತ್ರಾಂಶ ಅಳವಡಿಕೆ ಆಗಿದೆ ಎಂದು ವ್ಯಾಪಕವಾಗಿ ’ವೈರಲ್’ ಆಗಿದ್ದ ವಿಚಾರವು ಸುಳ್ಳು ಎಂಬುದು ಬಯಲಾಗಿದೆ. ಮೋದಿಯವರ ಭಾಷಣವು ಹೊಸ ನೋಟುಗಳಲ್ಲಿ ಡಿಸ್‌ಪ್ಲೇ ಆಗುವುದರಿಂದ ಖೋಟಾ ನೋಟುಗಳಿಗೆ ಕಡಿವಾಣ ಬೀಳಲಿದೆ ಎಂದು ವ್ಯಕ್ತವಾಗಿದ್ದ ಆಶಾವಾದ ಹುಸಿಯಾಗಿದೆ. ’ಮೋದಿ ಕೀ ನೋಟ್’ ಎಂಬ ಹೆಸರಿನ ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಂಡ ಮೊಬೈಲ್ ಫೋನ್ ಮೂಲಕ ಹೊಸ ನೋಟು ಮಾತ್ರವಲ್ಲ, ಆ ನೋಟಿನ ಝೆರಾಕ್ಸ್ ಪ್ರತಿಯ ಮೇಲೆ ಪ್ರಯೋಗ ಮಾಡಿದರೂ ಮೋದಿಯವರ ಭಾಷಣ ಪ್ರಸಾರವಾಗುತ್ತಿದ್ದು ಇದೊಂದು ಗಿಮಿಕ್ ಎಂಬುದು ಖಚಿತವಾಗಿದೆ. ಈ ಮಧ್ಯೆ, ಹೊಸ ನೋಟುಗಳಲ್ಲಿ ಪ್ರಧಾನಿಯವರ ಭಾಷಣ ಪ್ರಸಾರವಾಗುವ ಯೋಜನೆಯು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ್ದಾಗಲೀ, ಆರ್‌ಬಿಐಯವರದ್ದಾಗಲೀ ಅಲ್ಲ, ಯಾರೋ ಖಾಸಗಿ ವ್ಯಕ್ತಿಗಳು ’ಮನರಂಜನೆ’ಗಾಗಿ ಮತ್ತು ಹಣಕ್ಕಾಗಿ ಆಪ್ ಡೌನ್‌ಲೋಡು ಮಾಡುವ ಮೂಲಕ ಮಾಡಿರುವ ಕೆಲಸ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಹಳೆಯ ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳ ನಿಷೇಧ ಆಗಿ ಹೊಸದಾಗಿ ಚಲಾವಣೆಗೆ ತರಲಾಗಿರುವ 500 ಮತ್ತು 2000 ರೂಪಾಯಿಯ ನೋಟುಗಳಲ್ಲಿ ’ನರೇಂದ್ರ ಮೋದಿಯವರು ಭಾಷಣ ಮಾಡುತ್ತಿರುವ ತುಣುಕು ಇದೆ, ನವೆಂಬರ್ ೮ರಂದು ರಾತ್ರಿ ಮೋದಿಯವರು ಹಳೆಯ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿರುವ ಅಂಶಗಳು ಇದರಲ್ಲಿ ಇದೆ’ ಎಂದು ಹೇಳಲಾಗುತ್ತಿತ್ತು. ’ಮೋದಿ ಕೀ ನೋಟ್ ಎಂಬ ಹೆಸರಿನ ಆಂಡ್ರಾಯ್ಡ್ ಆಪ್ ಮೂಲಕ ಇಂಗ್ಲಿಷ್‌ನಲ್ಲಿರುವ ಮೋದಿ ಭಾಷಣ ಕೇಳಬಹುದಾಗಿದೆ. ಈ ಭಾಷಣ ಹಾಗೂ ನೋಟಿನ ತಂತ್ರಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಹೊಸ 2000ರೂ ನೋಟಿನ ಪೂರ್ಣ ಪ್ರಮಾಣವನ್ನು ಸ್ಕ್ಯಾನ್ ಮಾಡಿದಾಗ ಮೋದಿ ಭಾಷಣ ಬರುವಂತೆ ತಂತ್ರಾಂಶ ರೂಪಿಸಲಾಗಿದೆ. 500 ರೂ ಹಾಗೂ 1000 ರೂ ನೋಟನ್ನು ವ್ಯವಹಾರದಿಂದ ನಿಷೇಧಿಸಲಾಗುತ್ತಿದೆ ಎಂದು ನ.೮ರ ಸಂಜೆ ಮೋದಿ ಮಾಡಿದ ಭಾಷಣದ ತುಣುಕು ಇದಾಗಿರುತ್ತದೆ. ಭಾಷಣವನ್ನು ಆಫ್‌ಲೈನ್‌ನಲ್ಲಿಯೂ ಕೇಳಬಹುದಾಗಿದೆ, ಮೋದಿ ಕೀ ನೋಟ್ ಹೆಸರಿನ ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿ ನೋಟು ಸ್ಕ್ಯಾನ್ ಮಾಡಿದಲ್ಲಿ ಮೋದಿ ಭಾಷಣದ ವಿಡಿಯೋ ಪ್ರಸಾರವಾಗುತ್ತದೆ. ಹೊಸ ೫೦೦ ಹಾಗೂ 2000 ರೂ. ನೋಟುಗಳಲ್ಲಿ ಚಿಪ್ ಇದೆ ಎಂದು ಗುಲ್ಲು ಹಬ್ಬಿಸಲಾಗಿತ್ತು. ಆದರೆ ಈಗ ಮೊಬೈಲ್ ಅಪ್ಲಿಕೇಷನ್‌ವೊಂದರ ಮೂಲಕ ೨ ಸಾವಿರ ನೋಟನ್ನು ಸ್ಕ್ಯಾನ್ ಮಾಡಿದರೆ ಪ್ರಧಾನಿ ಮೋದಿ ಭಾಷಣ ಕೇಳಬಹುದೆಂಬ ಅಚ್ಚರಿ ಸಂಗತಿ ಬೆಳಕಿಗೆ ಬಂದಿದೆ’ ಎಂದು ಕೆಲ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಈ ವಿಚಾರ ಸಾಮಾಜಿಕ ತಾಲಜಾಣಗಳಲ್ಲಿಯೂ ಪ್ರಚಾರ ಪಡೆದಿತ್ತು. ಹಲವರು ಈ ಆಂಡ್ರಾಯ್ಡ್ ಆಪ್ ಮುಖಾಂತರ ಮೊಬೈಲ್ ಫೋನ್‌ಗಳಲ್ಲಿ ಮೋದಿಯವರ ಭಾಷಣದ ಝಲಕ್ ನೋಡಿದ್ದರು. ೫೦೦ ಮತ್ತು ೨೦೦೦ ರೂಪಾಯಿಯ ನೋಟುಗಳಲ್ಲಿ ಮೋದಿಯವರ ಭಾಷಣ ನೋಡಲು ಅವಕಾಶ ಇರುವುದರಿಂದ ಇನ್ನು ಮುಂದಕ್ಕೆ ಅಸಲಿ ನೋಟು ಯಾವುದು, ನಕಲಿ ನೋಟು ಯಾವುದು ಎಂದು ತಿಳಿದುಕೊಳ್ಳಬಹುದು, ಈ ಮೂಲಕ ಖೋಟಾ ನೋಟು ಹಾವಳಿಗೆ ಅಂತ್ಯ ಹಾಡಬಹುದು ಎಂದು ಜನಸಾಮಾನ್ಯರಿಂದ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಇದೀಗ ಹೊಸ ನೋಟುಗಳು ಮಾತ್ರವಲ್ಲ, ಈ ನೋಟುಗಳನ್ನು ಕಲರ್ ಮಾತ್ರವಲ್ಲ ಕಪ್ಪು ಬಿಳುಪು ಝೆರಾಕ್ಸ್ ಮಾಡಿದರೂ ಮೋದಿಯವರ ಭಾಷಣ ನೋಡಲು ಸಾಧ್ಯವಾಗುತ್ತಿದೆ. ಅಲ್ಲದೆ, ನೋಟುಗಳಲ್ಲಿ ಮೋದಿ ಭಾಷಣ ಮಾಡಿರುವ ವಿಚಾರ ಆರ್‌ಬಿಐಯಿಂದ ಅಂಗೀಕೃತಗೊಂಡಿರುವುದಲ್ಲ, ಮತ್ತು ಅದು ಸಾಧ್ಯವೂ ಇಲ್ಲ, ಯಾರೋ ಖಾಸಗಿ ವ್ಯಕ್ತಿಗಳು ಆಪ್ ಸೃಷ್ಠಿಸಿ ವೆಬ್ ಸರ್ವರ್ ಮೂಲಕ ನೋಟುಗಳ ಇಮೇಜ್ ಸ್ಕ್ಯಾನ್ ಮಾಡಿ ಇದೇ ಇಮೇಜ್‌ಗೆ ಹೋಲಿಕೆಯಾಗುವ ಯಾವುದೇ ಚಿತ್ರದ ಮೇಲೆ ಮೊಬೈಲ್ ಫೋನ್ ಇರಿಸಿದಾಗ ಮೋದಿಯವರ ಭಾಷಣ ಡಿಸ್‌ಪ್ಲೇ ಆಗುವಂತೆ ಮಾಡಲಾಗಿದೆ ಎಂದು ಸೈಬರ್ ತಜ್ಞರಿಂದ ಅಭಿಪ್ರಾಯ ವ್ಯಕ್ತವಾಗಿದೆ. ಹೊಸ ನೋಟುಗಳಲ್ಲಿ ಮೋದಿಯವರ ಭಾಷಣ ಪ್ರಸಾರದ ವಿಚಾರ ಪ್ರಚಾರವಾಗಿ ಕುತೂಹಲ, ಗೊಂದಲ ಉಂಟಾಗಿದ್ದರೂ ಈ ಬಗ್ಗೆ ಆರ್‌ಬಿಐ ಇದುವರೆಗೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.
ವೀಡಿಯೋ ನೋಡಲು ಬೇಕು ಆಪ್
ಈ ನೋಟಿನ ಮೇಲೆ ನೀವೂ ಸ್ಕ್ಯಾನ್ ಮಾಡಬೇಕಾದರೆ ಬೇಕಾಗಿರೋದು ಮೊಬೈಲ್ ಆಪ್. ನಿಮ್ಮ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮೋದಿ ಕೀ ನೋಟ್ ಎಂದು ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೆ ನಿಮಗೆ ಆಪ್ ಸಿಗುತ್ತದೆ. ಆಪ್ ಡೌನ್ ಲೋಡ್ ಮಾಡಿಕೊಂಡು, ಎರಡು ಸಾವಿರ ಮುಖ ಬೆಲೆಯ ನೋಟಿನ ಹಿಂಭಾಗದಲ್ಲಿ ಹಿಡಿದರೆ ಮೋದಿ ಅವರು ಭಾಷಣ ಮಾಡುತ್ತಿರುವ ವಿಡಿಯೋ ನಿಮಗೆ ಕಾಣುತ್ತದೆ. ನೋಟಿನ ಜೆರಾಕ್ಸ್ ಪ್ರತಿಯಲ್ಲೂ ಈ ವೀಡಿಯೋ ಕಾಣುತ್ತೆ.
ವೈರಲ್ ಆಗಿರುವ ಆಪ್
ಮೋದಿ ಭಾಷಣದ ಈ ವಿಡಿಯೋ ಇರುವ ನೋಟು ಅಸಲಿ ಎಂದು ವೈರಲ್ ಆಗಿದೆ. ಯಾರ ಮೊಬೈಲ್ ನೋಡಿದರೂ ಮೋದಿ ಕೀ ನೋಟ್ ಆಪ್ ಡೌನ್ ಲೋಡ್ ಮಾಡಿಕೊಂಡು ವಿಡಿಯೋ ನೋಡುತ್ತಿದ್ದಾರೆ. ಆದರೆ ಅಸಲಿ ಮಾತ್ರವಲ್ಲ ಅದರ ಜೆರಾಕ್ಸ್ ಪ್ರತಿಯಲ್ಲಿಯೂ ಈ ವೀಡಿಯೋ ಸಿಗುತ್ತಿದೆ. ತಜ್ಞರ ಪ್ರಕಾರ ಇದು ಮೊಬೈಲ್ ಆಪ್ ಮೂಲಕ ಅಳವಡಿಸಿರುವ ತಂತ್ರಜ್ಞಾನ. ಹಾಗಾಗಿ ನೋಟಿನಲ್ಲಿ ಈ ರೀತಿಯ ಸಿಸ್ಟಮ್ ಅಳವಡಿಸಲು ಸಾಧ್ಯವಿಲ್ಲ. ನೋಟಿನಲ್ಲಿ ಹೀಗೆ ಮಾಡಿದರೂ ಅದು ಕಾನೂನಿನ ಪ್ರಕಾರ ತಪ್ಪಾಗುತ್ತದೆ. ಆಪ್ ಕಂಪನಿಯ ಮೇಲೆ ಇದೀಗ ಪ್ರಕರಣಗಳು ದಾಖಲಾಗಿ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ. ಒಟ್ಟಾರೆ, ನಮ್ಮ ಜನತೆ ಹೊಸ ಯೋಜನೆಗೆ ಕುತೂಹಲಕಾರಿ ವಿಷಯಗಳಿಗೆ ಹೆಚ್ಚಾಗಿ ಆಕರ್ಷಿತರಾಗ್ತಾರೆ ಅನ್ನೋದಕ್ಕೆ ಮೋದಿ ಕೀ ನೋಟ್ ಆಪ್ ಸಣ್ಣ ಉದಾಹರಣೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.