ಸ್ನೇಹ ಸಂಧ್ಯಾ ಆಮಂತ್ರಣ ಪತ್ರಿಕೆ ಬಿಡುಗಡೆ

sneha sandya amantrana patrike bidugade copyಉಜಿರೆ : ತುಳು ಶಿವಳ್ಳಿ ಸಭಾ ಉಜಿರೆ ಮತ್ತು ಧರ್ಮಸ್ಥಳ ವಲಯದ ನೇತೃತ್ವದಲ್ಲಿ ಡಿ.31ರಂದು ಸಂಜೆ ಉಜಿರೆಯ ವಿಜಯರಾಘವ ಪಡ್ವೆಟ್ನಾಯರ ಆತಿಥ್ಯದಲ್ಲಿ ಪಡುವೆಟ್ಟು ಮನೆಯಲ್ಲಿ ನಡೆಯಲಿರುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ ಸ್ನೇಹ ಸಂಧ್ಯಾ ದ ಆಮಂತ್ರಣ ಪತ್ರಿಕೆಯನ್ನು ಧರ್ಮಸ್ಥಳ ಶಿವಪಾರ್ವತಿ ಕೃಪಾದಲ್ಲಿ ನಾರಾಯಣ ಕುದ್ರೆಂತ್ತಾಯ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಉಜಿರೆ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್, ಧರ್ಮಸ್ಥಳ ವಲಯಾಧ್ಯಕ್ಷ ಗಿರೀಶ ಕುದ್ರೆಂತ್ತಾಯ, ಕಾರ್ಯದರ್ಶಿ ವಸಂತ ಮಂಜಿತ್ತಾಯ, ಕೋಶಾಧಿಕಾರಿ ಶ್ರೀಪತಿ ಅಂರ್ಬುಡತ್ತಾಯ, ಸ್ನೇಹ ಸಂಧ್ಯಾದ ಸಂಚಾಲಕ ಪರಾರಿ ವೆಂಕಟ್ರಮಣ ಹೆಬ್ಬಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.