ನ.17-27 : ನಮ್ಮ ಮನೆ ಹವ್ಯಕ ಭವನದಲ್ಲಿ ಯೋಗ ಶಿಬಿರ

  ಗುರುವಾಯನಕೆರೆ : ಬೆಳ್ತಂಗಡಿ ಯೋಗ ಸಂದೇಶ ದ್ಯಾನ ಕೇಂದ್ರದ ಮಾರ್ಗದರ್ಶನದಡಿಯಲ್ಲಿ ಗುರುವಾಯನಕೆರೆಯ ಶ್ರೀ ವೇದವ್ಯಾಸ ಶಿಶುಮಂದಿರ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ವತಿಯಿಂದ ನಮ್ಮ ಮನೆ ಹವ್ಯಕ ಭವನದಲ್ಲಿ ಉಚಿತ ಯೋಗ, ಆರೋಗ್ಯ, ವ್ಯಕ್ತಿತ್ವ ವಿಕಸನದ ೨೫ನೇ ಶಿಬಿರವು ನ.17ರಿಂದ 27ರ ವರೆಗೆ ನಡೆಯಲಿದೆ.  ಶಿಬಿರದಲ್ಲಿ ಯೋಗದ ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಮುದ್ರೆಗಳನ್ನು ಶೀತ್ಯರಿ, ಶೀತಳೀಕರಣ, ಧ್ಯಾನ ಹಾಗೂ ಸಾತ್ವಿಕ ಆಹಾರ, ಪಾನೀಯ ಇವುಗಳ ಬಗ್ಗೆ ಕ್ರಮಬದ್ಧವಾಗಿ ಅಭ್ಯಾಸಮಾಡಿಸಲಾಗುವುದು. ಸಾತ್ವಿಕ ಆಹಾರ, ಪಾನಿಯದ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿಗಳನ್ನು ಯೋಗ ಗುರುಗಳು ನೀಡಲಿರುವರು.     ಕಾರ್ಯಕ್ರಮದ ಉದ್ಘಾಟನೆಯು ನ. 17ರಂದು ಸಾಯಂಕಾಲ ೬ಗಂಟೆಗೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.