ಕಾಶಿಪಟ್ಣ: ಕಾರ್ತಿಕ ದೀಪೋತ್ಸವ-ಸಭಾ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

kashipatna copyಕಾಶಿಪಟ್ಣ: ಇಲ್ಲಿಯ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವವು ನ. 14ರಂದು ಜರಗಿತು. ರಾತ್ರಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕರಾದ ಕಮಲಾದೇವಿ ಪ್ರಸಾದ್ ಆಶೀರ್ವಚನ ನೀಡಿದರು. ವಾಮದಪದ ವಿನ ಬ್ರಹ್ಮಶ್ರೀ ಉದಯ ಪಾಂಗಣ್ಣಾಯ ತಂತ್ರಿಗಳು ಶುಭಾಸಂಸನೆ ನೆರವೇರಿಸಿ ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಶಿಪಟ್ಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ವಹಿಸಿದ್ದರು. ಅಳದಂಗಡಿ ವರ್ಷಾಲೆಯ ಸೋಮನಾಥ ಬಂಗೇರ, ಸುಂಕದಕಟ್ಟೆ ಯಕ್ಷಗಾನ ಮೇಳದ ಸಂಚಾಲಕ ಜಿ.ಕೆ. ಶ್ರೀನಿವಾಸ್ ಸಾಲ್ಯಾನ್ ಬೋಂದೆಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ: ಮದ್ದಳೆಗಾರ ಕಾಶಿಪಟ್ಣ ಸುಳ್ಳಿಬೆಟ್ಟುವಿನ ರಾಮ್‌ರಾವ್ ದಂಪತಿಯವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ವಿಕ್ರಮ್ ಕುಮಾರ್ ಜೈನ್ ಸ್ವಾಗತಿಸಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ. ಅನಂತ ಅಸ್ರಣ್ಣ ವಂದಿಸಿದರು. ಶಂಕರ ಭಟ್ ಬಾಲ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.