ವಿಧಾನ ಮಂಡಲ ಅಧಿವೇಶನ ಹಿನ್ನಲೆ ಎ.ಪಿ.ಎಂ.ಸಿ ಚುನಾವಣೆ ಮುಂದೂಡಿಕೆ

  ನೂತನ ವೇಳಾಪಟ್ಟಿ ಪ್ರಕಟ ಜ.12ಕ್ಕೆ ಚುನಾವಣೆ   

ನಾಮಪತ್ರ ಸಲ್ಲಿಸಿದವರು
ಮತ್ತೆ ನಾಮಪತ್ರ ಸಲ್ಲಿಸಬೇಕು

ನ. 16 ಚುನಾವಣಾ ನೋಟೀಸು ಹೊರಡಿಸುವುದು.
ನ. 22 ನಾಮಪತ್ರ ಸಲ್ಲಿಕೆ ಆರಂಭ
ನ. 29 ನಾಮಪತ್ರ ಸಲ್ಲಿಕೆಗೆ ಕೊನೆ ದಿನ.
ನ. 30 ನಾಮಪತ್ರಗಳ ಪರಿಶೀಲನೆ.
ಜ. 02 ನಾಮಪತ್ರ ಹಿಂತೆಗೆತಕ್ಕೆ ಕೊನೆ ದಿನ.
ಜ. 12 ಮತದಾನ ನಡೆಯುವ ದಿನ.
ಜ. 13 ಅಗತ್ಯವಿದ್ದರೆ ಮರು ಮತದಾನ’
ಜ. 14 ಮತಗಳ ಎಣಿಕೆ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ಕೃಷಿಕರ ಕ್ಷೇತ್ರ ಹಾಗೂ ಸಹಕಾರಿ ಮತ್ತು ವರ್ತಕರ ಕ್ಷೇತ್ರ ಸೇರಿದಂತೆ ಒಟ್ಟು 14 ಕ್ಷೇತ್ರಗಳ ಸದಸ್ಯರ ಆಯ್ಕೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೊನೆಗೊಂಡಾಗ ಒಟ್ಟು 39 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಈ ನಡುವೆ ರಾಜ್ಯ ಸರಕಾರ ಬೆಳಗಾವಿ ಅಧಿವೇಶನ ಮತ್ತು ಬರ ಪರಿಹಾರ ವಿತರಣೆ ಹಿನ್ನಲೆಯಲ್ಲಿ ಹಿಂದಿನ ವೇಳಾಪಟ್ಟಿಯನ್ನು ಹಿಂಪಡೆದು ಎ.ಪಿ.ಎಂ.ಸಿಯ ನೂತನ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ರಾಜ್ಯದಲ್ಲಿ 139 ತಾಲೂಕುಗಳನ್ನು ಸರಕಾರ ಬರಪೀಡಿತ ಎಂದು ಘೋಷಿಸಿದ್ದು, ಈ ತಾಲೂಕುಗಳಲ್ಲಿ ಬರ ಪರಿಹಾರದ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕಾಗಿದೆ. ಜೊತೆಗೆ ನ.21ರಿಂದ ಬೆಳಗಾವಿಯಲ್ಲಿ 10 ದಿನಗಳ ಕಾಲ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸರಕಾರವು ಎ.ಪಿ.ಎಂ.ಸಿ ಚುನಾವಣೆಯನ್ನು
ಡಿಸೆಂಬರ್ ಎರಡನೇ ವಾರದಿಂದ ಪ್ರಾರಂಭಿಸಿ, ಜ.20ರೊಳಗೆ ಪೂರ್ಣಗೊಳಿಸಲು ಕಾಲಾವಕಾಶ ಕೋರಿ ನ್ಯಾಯಾಯಲಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ನೂತನ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನೂತನ ವೇಳಾ ಪಟ್ಟಿಯಂತೆ ಡಿ.16 ಚುನಾವಣಾ ನೋಟೀಸನ್ನು ಹೊರಡಿಸಬೇಕಾದ ದಿನವಾಗಿದ್ದು, ಡಿ.22ರಿಂದ
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಡಿ.29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿ.೩೦ ನಾಮಪತ್ರಗಳ ಪರಿಶೀಲನೆ, ಜ.2ಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಜ.12 ಮತದಾನ ನಡೆಯಲಿದ್ದು, ಜ.೧೪ರಂದು ಮತ ಎಣಿಕೆ ನಡೆಯಲಿದೆ. ನೂತನ ವೇಳಾ ಪಟ್ಟಿ ಪ್ರಕಟವಾಗಿರುವುದರಿಂದ ಈಗಾಗಲೇ ಎ.ಪಿ.ಎಂ.ಸಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಮತ್ತೆ ನೂತನ ವೇಳಾಪಟ್ಟಿಯಂತೆ ನಾಮಪತ್ರ ಸಲ್ಲಿಸಬೇಕಾಗಿದೆ.
ಈ ಹಿಂದಿನ ವೇಳಾ ಪಟ್ಟಿಯಂತೆ ನಾಮಪತ್ರ ಸಲ್ಲಿಕೆ ವಿವರ: ಬೆಳ್ತಂಗಡಿ ಕ್ಷೇತ್ರ- ಮಹಿಳೆಗೆ ಮೀಸಲಿಡಲಾಗಿರುವ ಬೆಳ್ತಂಗಡಿ ಕೃಷಿಕರ ಕ್ಷೇತ್ರಕ್ಕೆ ವಿಮಲ ಕಂಚಿಂಜ ಮೇಲಂತಬೆಟ್ಟು, ಗೀತಾ ಆರ್ ಸುವರ್ಣ ಅನುಗ್ರಹ ಮೇಲಂತಬೆಟ್ಟು, ಪಲ್ಲವಿ ಪ್ರತಿಕ್ಷಾ ನಿಲಯ ಸುದೆಮುಗೇರು ನಾಮಪತ್ರ ಸಲ್ಲಿಸಿದ್ದರು.
ಉಜಿರೆ ಕ್ಷೇತ್ರ- ಉಜಿರೆ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನೀಡಲಾಗಿದ್ದು, ಈ ಕ್ಷೇತ್ರಕ್ಕೆ ಕೇಶವ ಪಿ. ಪಾದೆಹಿತ್ಲು ಕಂಚಿಮಾರು ಬೈಲು ಧರ್ಮಸ್ಥಳ, ಗ್ರೇಸಿಯಸ್ ವೇಗಸ್ ಈಡನ್ ಗಾರ್ಡನ್ ಕನ್ಯಾಡಿ-||, ಕೇಶವ ಭಟ್ ಅತ್ತಾಜೆ ಉಜಿರೆ ಇವರು ನಾಮಪತ್ರ ಸಲ್ಲಿಸಿದ್ದರು.
ಇಂದಬೆಟ್ಟು ಕ್ಷೇತ್ರ- ಇಂದಬೆಟ್ಟು ಕೃಷಿಕರ ಕ್ಷೇತ್ರವನ್ನು ಅನುಸೂಚಿತ ಪಂಗಡಕ್ಕೆ ನಿಗದಿಗೊಳಿಸಲಾಗಿದ್ದು, ಈ ಕ್ಷೇತ್ರಕ್ಕೆ ಲಕ್ಷ್ಮಣ ಅಲಂಗಾಯ ಗಂಡಿಬಾಗಿಲು ನೆರಿಯ ಮತ್ತು ಆನಂದ ನಾಯ್ಕ ವಿದ್ಯಾನಗರ ನಿಡಿಗಲ್ ಕಲ್ಮಂಜ ಇವರು ನಾಮಪತ್ರ ಸಲ್ಲಿಸಿದ್ದರು.
ನೆರಿಯ ಕ್ಷೇತ್ರ- ನೆರಿಯ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ಮೀಸಲಿಡಲಾಗಿದ್ದು, ಈ ಕ್ಷೇತ್ರಕ್ಕೆ ನಾರಾಯಣ ಗೌಡ ಕೊಲಂಬೆ ಚಾರ್ಮಾಡಿ ಮತ್ತು ಗಫೂರ್ ಸಾಹೇಬ್ ಬೊಳ್ಮಿನಾರು ಪುದುವೆಟ್ಟು ನಾಮಪತ್ರ ಸಲ್ಲಿಸಿದ್ದರು.
ಕೊಕ್ಕಡ ಕ್ಷೇತ್ರ- ಕೊಕ್ಕಡ ಕೃಷಿಕರ ಕ್ಷೇತ್ರವನ್ನು ಅನುಸೂಚಿತ ಜಾತಿಗೆ ನಿಗದಿಗೊಳಿಸಲಾಗಿದ್ದು, ಈ ಕ್ಷೇತ್ರಕ್ಕೆ ಈಶ್ವರ ಭೈರ ಪಾರಿಜಾತ ನಿಲಯ ಪುತ್ರಬೈಲು ಲಾಲ, ಬಿ.ಕೆ ವಸಂತ ಸಿದ್ದಾರ್ಥ ವಿಹಾರ್ ರೆಂಕೆದಗುತ್ತು ಬೆಳ್ತಂಗಡಿ, ಪ್ರೇಮಚಂದ್ರ ಎಸ್ ಸಂಗಮ ನಗರ ಮುದ್ದಿಗೆ ಹತ್ಯಡ್ಕ, ಚಂದು ಎಲ್ ಕಳಸದಬೆಟ್ಟು ಉಜಿರೆ ಇವರು ನಾಮಪತ್ರ ಸಲ್ಲಿಸಿದ್ದರು.
ಕಣಿಯೂರು ಕ್ಷೇತ್ರ- ಕಣಿಯೂರು ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನೀಡಲಾಗಿದ್ದು, ಎಂ. ನಾರಾಯಣ ಗೌಡ ಮೈಂದಕೋಡಿ ಕೊಯ್ಯೂರು, ಗಣೇಶ್ ಪ್ರಸಾದ್ ಎಂ.ಕೆ ಈಶ್ವರ ನಿಲಯ ಕಜೆ ಮನೆ ಉರುವಾಲು, ಯು. ನಾರಾಯಣ ಭಟ್ ಸತ್ಯಕೃಪಾ ಕುಕ್ಕಾಜೆ ಉರುವಾಲು, ಪುರಂದರ ಶೆಟ್ಟಿ ಪಣೆಕ್ಕರ ಕಣಿಯೂರು, ಹೊನ್ನಪ್ಪ ಗೌಡ ಸೋರಿಕುಮೇರ್ ಬಂದಾರು ಇವರು ನಾಮಪತ್ರ ಸಲ್ಲಿಸಿದ್ದರು.
ಮಚ್ಚಿನ ಕ್ಷೇತ್ರ- ಮಚ್ಚಿನ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನಿಗದಿಪಡಿಸಲಾಗಿದ್ದು, ಸಂತೋಷ್ ಕುಮಾರ್ ಅದಮ್ಯ ಮನೆ ಬಾರ್ಯ ಗ್ರಾಮ, ನವೀನ್ ರೈ ಪೊರ್ಕಳ ಪುತ್ತಿಲ ಗ್ರಾಮ, ಜಯಾನಂದ ಕಲ್ಲಾಪು ಕರಾಯ ಗ್ರಾಮ, ಕೆ.ಎಸ್ ಅಬ್ದುಲ್ಲಾ ಕರಾಯ ಶಾಲಾ ಬಳಿ ಇವರು ನಾಮಪತ್ರ ಸಲ್ಲಿಸಿದ್ದರು.
ಮಡಂತ್ಯಾರು ಕ್ಷೇತ್ರ- ಮಡಂತ್ಯಾರು ಕೃಷಿಕರ ಕ್ಷೇತ್ರವನ್ನು ಮಹಿಳೆಗೆ ಮೀಸಲಿರಿಸಲಾಗಿದ್ದು, ಸೇಸಮ್ಮ ಪೊಕ್ಕಿದಕಜೆ ಓಡಿಲ್ನಾಳ, ವತ್ಸಲಾ ಲಕ್ಷ್ಮೀ ನಿವಾಸ ಕುವೆಟ್ಟು, ಸೆಲೆಸ್ಟಿನ್ ಡಿ ಸೋಜ ಯು.ಎಂ. ಕಂಪೌಂಡ್ ಮಾಲಾಡಿ ಇವರು ನಾಮಪತ್ರ ಸಲ್ಲಿಸಿದ್ದರು.
ವೇಣೂರು ಕ್ಷೇತ್ರ- ವೇಣೂರು ಕೃಷಿಕರ ಕ್ಷೇತ್ರವನ್ನು ಹಿಂದುಳಿದ ವರ್ಗ ಬಿ’ಗೆ ನಿಗದಿಗೊಳಿಸಲಾಗಿದ್ದು, ಪಿ.ಜಯರಾಮ ಶೆಟ್ಟಿ ಜಯಶ್ರೀ ಖಂಡಿಗ ಕರಿಮಣೇಲು, ಅಶೋಕ್ ಪುತ್ಯೆ ಪಡಂಗಡಿ ಗ್ರಾಮ, ಪ್ರವೀಣ್‌ಚಂದ್ರ ಜೈನ್ ನಡಿಬೆಟ್ಟು ಪಡಂಗಡಿ ನಾಮಪತ್ರ ಸಲ್ಲಿಸಿದ್ದರು.
ನಾರಾವಿ ಕ್ಷೇತ್ರ- ನಾರಾವಿ ಕೃಷಿಕರ ಕ್ಷೇತ್ರವನ್ನು ಹಿಂದುಳಿದ ವರ್ಗ ಎ’ಗೆ ಮೀಸಲಿರಿಸಲಾಗಿದ್ದು, ಸತೀಶ್ ಕೆ. ಸ್ಪೂರ್ತಿ ಮಾರ್ಲೋಟ್ಟು ಕಾಶಿಪಟ್ಣ, ವಿಠಲ ಪೂಜಾರಿ ಸಾಂತ್ಯಾಲು ಸಾವ್ಯ, ನಿತ್ಯಾನಂದ ಯೋಗಕ್ಷೇಮ ಪಿಲ್ಯ, ಮೋಹನ ಅಂಡಿಂಜೆ ಇವರು ನಾಮಪತ್ರ ಸಲ್ಲಿಸಿದ್ದರು.
ಅಳದಂಗಡಿ ಕ್ಷೇತ್ರ- ಅಳದಂಗಡಿ ಕೃಷಿಕರ ಕ್ಷೇತ್ರವನ್ನು ಸಾಮಾನ್ಯರಿಗೆ ನಿಗದಿಗೊಳಿಸಲಾದ್ದು, ಈ ಕ್ಷೇತ್ರಕ್ಕೆ ಚಿದಾನಂದ ಪೂಜಾರಿ ಎಲ್ಡಕ್ಕ ಶಿರ್ಲಾಲು, ಭಾಸ್ಕರ ಸಾಲ್ಯಾನ್ ಅಂತ್ರಂಗೆ ಶಿರ್ಲಾಲು ನಾಮಪತ್ರ ಸಲ್ಲಿಸಿದ್ದರು.
ಸಹಕಾರಿ ಸಂಘಗಳ ಕ್ಷೇತ್ರ- ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಗಳ ಸಹಕಾರಿ ಸಂಘಗಳ ಕ್ಷೇತ್ರದಿಂದ ಇಚ್ಚಿಲ ಸುಂದರ ಗೌಡ ಇಚ್ಚಿಲ ಮನೆ ಉಜಿರೆ, ಸಂಸ್ಕರಣಾ ಸಹಕಾರಿ ಸಂಘ- ಬೆಳ್ತಂಗಡಿ ಕೃಷಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರಕ್ಕೆ ಎನ್. ಜೀವಂಧರ್ ಕುಮಾರ್ ಕುತ್ಲೂರು, ವರ್ತಕರ ಕ್ಷೇತ್ರ- ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರ ಕ್ಷೇತ್ರಕ್ಕೆ ಪುಷ್ಪರಾಜ ಹೆಗ್ಡೆ ಅಗ್ನಿಲಾ ಟ್ರೇಡರ‍್ಸ್ ಮಡಂತ್ಯಾರು ಮತ್ತು ಚಂದ್ರಶೇಖರ ಗೌಡ ಶ್ರೀ ಮಂಜುನಾಥ ಆಯಿಲ್ ಮಿಲ್ ಜೋಡುಮಾರ್ಗ ಕೊಕ್ಕಡ ಇವರು ನಾಮಪತ್ರ ಸಲ್ಲಿಸಿದ್ದರು.
ಮತ್ತೆ ನಾಮಪತ್ರ ಸಲ್ಲಿಸಬೇಕು: ಎ.ಪಿ.ಎಂ.ಸಿ ಚುನಾವಣೆಗೆ ಹಳೆಯ ವೇಳಾ ಪಟ್ಟಿಯಂತೆ ಈಗಾಗಲೇ ೩೯ ಮಂದಿ ವಿವಿಧ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದ್ದು, ಸರಕಾರ ಇದೀಗ ನೂತನ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಈಗ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ನೂತನ ವೇಳಾ ಪಟ್ಟಿಗೆ ಅನುಸಾರವಾಗಿ ನಾಮಪತ್ರವನ್ನು ಸಲ್ಲಿಸಬೇಕಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.