ಕೋಯ ನಗರ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

2

3

ಇಂದಬೆಟ್ಟು: ಗ್ರಾಮದ ಕೋಯ ನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ. 14 ರಂದು ಆಚರಿಸಲಾಯಿತು.
ಚೇತನ ಸ್ವಸಹಾಯ ಸಂಘ ಮತ್ತು ಅಂಗನವಾಡಿ ಸಮಿತಿಯ ಸಹಭಾಗಿತ್ವದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಪುಟಾಣಿಗಳಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಪುಟಾಣಿಗಳಿಂದಲೇ ಸಭಾ ಕಾರ್ಯಕ್ರವನ್ನು ನಡೆಸಿ ಸ್ಪರ್ಧಾ ವಿಜೇತ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಸಮಿತಿ ಸದಸ್ಯರುಗಳಾದ ಬಿ. ಹೆಚ್ ಅಬೂಬಕ್ಕರ್ ಹಾಜಿ, ನೇಮಿರಾಜ್ ಕಿಲ್ಲೂರು, ಸಾಜಿದಾ ಬಿ. ಹೆಚ್, ಅಲಿಮಮ್ಮ, ವಿಮಲಾ, ರೇಖಾ, ಆಶಾ ಕಾರ್ಯಕರ್ತೆ ರಜನಿ, ಅಂಗನವಾಡಿ ಸಹಾಯಕಿ ಗುಲ್ಜಾರ್ ಬಿ ಹಾಗೂ ಮಕ್ಕಳ ಪೋಷಕರೆಲ್ಲರೂ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಸ್ವಾಗತಿಸಿ ವಂದಿಸಿದರು.
ವರದಿ: ನೇಮಿರಾಜ್ ಕಿಲ್ಲೂರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.