4.50 ಲಕ್ಷ ಮೌಲ್ಯದ ಕರ್ಮರ ಜಾತಿಯ ಕಟ್ಟಿಗೆ ಅಕ್ರಮ ಸಾಗಾಟ : ಲಾರಿ ಚಾಲಕ ಹಾಗೂ ಇತರ ಇಬ್ಬರು ಪರಾರಿ

mara 1

mara

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯಲ್ಲಿ ಗಸ್ತು ಸಂಚರಿಸುತ್ತಾ ಓಡಿಲ್ನಾಳ ಗ್ರಾಮದ ರೇಷ್ಮೆ ರೋಡ್ ಎಂಬಲ್ಲಿ ಸದ್ರಿ ಲಾರಿಯಲ್ಲಿ ಕರ್ಮರ ಜಾತಿಯ ಕಟ್ಟಿಗೆಯನ್ನು ಅಕ್ರಮವಾಗಿ ಸಾಗಿಸುತ್ತಿದ್ದುದ್ದನ್ನು ಪತ್ತೆ ಹಚ್ಚಿರುತ್ತಾರೆ.
ಇಂದು ಬೆಳಗ್ಗಿನ ಜಾವ 4.00 ಗಂಟೆ -ಸಮಯದಲ್ಲಿ ಕಾಲ ಭೈರವ ರಾತ್ರಿ ಗಸ್ತು ತಂಡದ ಸಿಬ್ಬಂದಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಕಾದು ಕುಳಿತು ಎದುರು ಗಡೆಯಿಂದ ಬರುತ್ತಿದ್ದ ಲಾರಿಯನ್ನು ತಪಾಸಣೆ ಮಾಡಿದಾಗ ಲಾರಿ ಚಾಲಕ ಹಾಗೂ ಇತರ ಇಬ್ಬರು ಓಡಿ ತಲೆ ಮರೆಸಿಕೊಂಡಿರುತ್ತಾರೆ. ಕೆಎ 19ಬಿ, 7825 ನೋಂದಣಿ ಸಂಖ್ಯೆ ಹೊಂದಿದ ಲಾರಿಯನ್ನು ಕಟ್ಟಿಗೆ ಸಮೇತ ಸರಕಾರಕ್ಕೆ ಅಮಾನತುಪಡಿಸಿಕೊಳ್ಳಲಾಗಿದೆ.
ಬಿ.ಸುಬ್ಬಯ್ಯ ನಾಯ್ಕ ವಲಯ ಅರಣ್ಯಾಧಿಕಾರಿ ಇವರ ಮಾರ್ಗದರ್ಶನದಂತೆ ಹರಿಪ್ರಸಾದ್, ಉಪ ವಲಯ ಅರಣ್ಯಾಧಿಕಾರಿ ಬೆಳ್ತಂಗಡಿ ಶಾಖೆ ಇವರು ಪ್ರಕರಣ ದಾಖಲಿಸಿಕೊಂಡಿದ್ದು, ತಕ್ಷೀರು ಪತ್ತೆ ಹಚ್ಚುವಲ್ಲಿ ಗೇರುಕಟ್ಟೆ ಶಾಖಾ ಉಪ ವಲಯ ಅರಣ್ಯಾಧಿಕಾರಿ ಸುಂದರ್ ಜೆ.ಟಿ ಅರಣ್ಯ ರಕ್ಷಕರುಗಳಾದ ಆನಂದ ಮೋಹಿತೆ, ರಾಘವೇಂದ್ರ ಪ್ರಸಾದ್ ಎಂ.ಕೆ ಮತ್ತು ಭವಾನಿ ಶಂಕರ್ ಪುತ್ರನ್ ಇವರು ಸಹಕರಿಸಿರುತ್ತಾರೆ. ಪ್ರಕರಣದಲ್ಲಿ ಅಮಾನತು ಪಡಿಸಲಾದ ಲಾರಿ ಮತ್ತು ಕಟ್ಟಿಗೆ ಸೇರಿ ಸೊತ್ತಿನ ಒಟ್ಟು ಮೌಲ್ಯ ರೂ.4.50 ಲಕ್ಷ ಎಂದು ಅಂದಾಜಿಸಲಾಗಿದೆ.
ಸರದಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಡಾ| ಕೆ.ಟಿ ಹನುಮಂತಪ್ಪ ಇವರ ನಿರ್ದೇಶನದ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಾದ ಶ್ರೀಧರ ನಾಯಕ್ ಇವರು ಕೈಗೊಂಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.