ಕೊಕ್ಕಡ : ನಗರ ಭಜನಾ ಷಷ್ಟ್ಯಬ್ದ

bajane 1

bajane 2

bajane 3

bajane 4

bajane

ಕೊಕ್ಕಡದ ನಗರ ಭಜನಾ ಷಷ್ಟ್ಯಬ್ದ ಸಮಿತಿ , ವಿಶ್ವ ಹಿಂದೂ ಪರಿಷತ್ , ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ, ನಗರ ಭಜನಾ ಸಮಿತಿ ಗಳ ಸಹಯೋಗದಲ್ಲಿ ನ. ೬ ರಂದು ಕೊಕ್ಕಡದಲ್ಲಿ ಆರಂಭವಾಗಿರುವ ನಗರ ಭಜನಾ ಷಷ್ಟ್ಯಬ್ದ ಕಾರ್ಯಕ್ರಮದ ಸಮಾರೋಪ ಸಮಾರಂಭವು ನ.11 ರಂದು ಕೊಕ್ಕಡದ ಸಂಕ್ರಾಂತಿ ಮೈದಾನದಲ್ಲಿ ನಡೆದಿದ್ದು ಈ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲಜೀ ಪ್ರಮುಖ ಭಾಷಣ ಮಾಡಿದರು.
ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರಿನ ವಿಭಾಗ ಕಾರ್ಯವಾಹ ನ. ಸೀತಾರಾಮ್ ದಿಕ್ಸೂಚಿ ಭಾಷಣ ಮಾಡಿದರು. ನಗರ ಭಜನಾ ಷಷ್ಟ್ಯಬ್ದ ಸಮಿತಿ ಅಧ್ಯಕ್ಷ ನ್ಯಾಯವಾದಿ ಹರೀಶ್ ಪೂಂಜ ಹಾಗೂ ಮುಖ್ಯ ಅತಿಥಿಗಳಾಗಿ ಬಜರಂಗ ದಳದ ಮಂಗಳೂರು ಪ್ರಾಂತ್ಯ ಸಂಯೋಜಕ ಶರಣ್ ಪಂಪ್‌ವೆಲ್, ರೆಖ್ಯ ಗುಡ್ರಾಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ, ಬೆಳ್ತಂಗಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಾಲಕ ಕೃಷ್ಣ ಭಟ್, ಗೋರಕ್ಷಾ ಪ್ರಮುಖ್ ರಘು, ವಿಶ್ವ ಹಿಂದೂ ಪರಿಷತ್ ಡೀಕಯ್ಯ ಪೆರುವೋಡಿ, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ, ಷಷ್ಟ್ಯಬ್ದ ಸಮಿತಿಯ ಗೌರವಾಧ್ಯಕ್ಷ ರಾಘವೇಂದ್ರ ನಾಯಕ್, ಬಜರಂಗ ದಳದ ಸಂಚಾಲಕ ಭಾಸ್ಕರ ಧರ್ಮಸ್ಥಳ, ವಿಶ್ವ ಹಿಂದೂ ಪರಿಷತ್ ಸಂಚಾಲಕ ನವೀನ್ ನೆರಿಯ , ಶ್ರೀರಾಮ ಸೇವಾ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಕೊಕ್ಕಡ, ಷಷ್ಟ್ಯಬ್ದ ಸಮಿತಿ ಕಾರ್ಯದರ್ಶಿ ಜನಾರ್ಧನ ಕೆ.ಪಿ. ನಗರ ಭಜನಾ ಸಮಿತಿ ಅಧ್ಯಕ್ಷ ಈಶ್ವರ ಭಟ್, ವಿಶ್ವ ಹಿಂದೂ ಪರಿಷತ್ ಕೊಕ್ಕಡ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಶ್ರೀ ಕ್ಷೇತ್ರ ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ. ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಮತ್ತು ನಗರ ಭಜನಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಕೊಕ್ಕಡದ ನಗರ ಭಜನಾ ಸಪ್ತಾಹವನ್ನು ಮುನ್ನಡೆಸಿದ ಸ್ಥಳೀಯರಾದ ಕೃಷ್ಣ ಕೆದಿಲಾಯ ಕೊಕ್ಕಡ, ನಾರಾಯಣ ಹೆಬ್ಬಾರ್ ಪುತ್ತ್ಯೆ , ದೇವಚಂದ್ರ ಗೌಡ ನೂಜಿಲೆ, ಕೊರಗಪ್ಪ ಆಚಾರ್ಯ ಆಲಡ್ಕ, ನಾರಾಯಣ ನಾಯ್ಕ ಓಣಿತ್ತಾರು ಇವರನ್ನು ನಗರ ಭಜನೆಗೆ ಸಲ್ಲಿಸಿದ ಸೇವೆಗಾಗಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.