ಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿ ಭೇಟೆ, ಆರೋಪಿಗಳನ್ನು ಬಂಧನಕ್ಕೆ ಒಳಹಪಡಿಸುವಂತೆ ಆದೇಶ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

charmady aranya copyಚಾರ್ಮಾಡಿ : ಉಡ ಜಾತಿಯ ಕಾಡು ಪ್ರಾಣಿಯನ್ನು ಮಾಂಸ ಮಾಡುವ ಉದ್ದೇಶದಿಂದ ಭೇಟೆಯಾಡಿ ಜೀವಂತವಾಗಿ ಹಿಡಿದು ತರುತ್ತಿರುವುದನ್ನು ನ.೦1ರಂದು ಪತ್ತೆ ಹಚ್ಚಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆದೇಸಿಸಿರುತ್ತಾರೆ.
ಭೇಟೆಯು ಚಾರ್ಮಾಡಿ ಕನಪ್ಪಾಡಿ ಮೀಸಲು ಅರಣ್ಯದೊಳಗಡೆ ಬೊಲ್ಲಡ್ಕ ಎಂಬಲ್ಲಿ ಅರಣ್ಯ ಪ್ರದೇಶದ ಒಳಗಡೆ ನಡೆದಿದೆ. ಆರೋಪಿಗಳಾದ ಸವಣಾಲು ಗ್ರಾಮದ ಮಿತ್ತಲಾಂಬು ಮನೆಯ ಶೇಖರ ಆಳ್ವ (39ವ), ಪುದುವೆಟ್ಟು ಗ್ರಾಮದ ಪೆಲತ್ತಡಿ ಮನೆಯ ಚಿದಾನಂದ ಗೌಡ(29ವ) ಎಂಬವರನ್ನು ದಸ್ತಗಿರಿ ಮಾಡಿ ಭೇಟೆಗೆ ಬಳಸಿದ ಕತ್ತಿ ಮತ್ತು ಉಡ ಜಾತಿಯ ಕಾಡುಪ್ರಾಣಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಯವರಾದ ಬಿ.ಸುಬ್ಬಯ್ಯ ನಾಯ್ಕ ಇವರ ಮಾರ್ಗದರ್ಶನದಂತೆ ಚಾರ್ಮಾಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ.ಕೆ ಪ್ರೊಕರಣ ದಾಖಲಿಸಿಕೊಂಡಿದ್ದು, ತಕ್ಷೀರು ಪತ್ತೆ ಹಚ್ಚುವಲ್ಲಿ ಉಪ ವಲಯ ಅರಣ್ಯಾಧಿಕಾರಿಯವರಾದ ಭವಾನಿಶಂಕರ ಬಿ.ಜಿ, ಅರಣ್ಯ ರಕ್ಷಕರಾದ ಮೌನೇಶ, ರಾಘವೇಂದ್ರ ಪ್ರಸಾದ ಎಂ.ಕೆ ಮತ್ತು ಮಂಜುನಾಥ ಭಂಡಾರಿಯವರು ಸಹಕರಿಸಿದ್ದಾರೆ.
ಉಡವನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಪಶು ವೈದ್ಯಾಧಿಕಾರಿಯವರಿಂದ ಚಿಕಿತ್ಸೆ ಕೊಡಿಸಿ ಕಾಡಿಗೆ ಮರಳಿ ಬಿಡಲಾಗಿದೆ.
ಸದರಿ ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಾದ ಡಾ| ಕೆ.ಟಿ ಹನುಮಂತಪ್ಪ ಇವರ ನಿರ್ದೇಶನದ ಮೇರೆಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಾದ ಶ್ರೀಧೃ ನಾಯಕ್ ಕೈಗೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.