ವಿಕಲಚೇತನರಿಗೆ ಸಾಧನ-ಸಲಕರಣೆಗಳ ವಿತರಣೆ

Vikalachethana salakarane copyಬೆಳ್ತಂಗಡಿ : ನಗರ ಪಂಚಾಯತ್ ಬೆಳ್ತಂಗಡಿ, ತಾ.ಪಂ. ಬೆಳ್ತಂಗಡಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಇವುಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಅನುದಾನಿತ ಅಲಿಮ್ಕೊ ಸಂಸ್ಥೆ ಹಾಗೂ ಆರ್.ಇ.ಸಿ. ಸಂಸ್ಥೆಗಳು ಕೊಡಮಾಡಲ್ಪಡುವ ವಿಶಿಷ್ಟ ಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವು ಬೆಳ್ತಂಗಡಿಯ ಅಂಬೇಡ್ಕರ್ ಭವನದಲ್ಲಿ ಅ.28ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ.ಪಂ. ಅಧ್ಯಕ್ಷ ಮುಗುಳಿ ನಾರಾಯಣ ರಾವ್ ವಹಿಸಿ ಎಲ್ಲರೂ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಭಾಗವಹಿಸಿದರು, ಆರ್.ಇ.ಸಿ. ಸಂಸ್ಥೆಯ ಹನುಮಂತಯ್ಯ ಹಾಗೂ ಸಾಕೇತ್, ಅಲಿಮ್ಕೋ ಸಂಸ್ಥೆಯ ಸ್ಮೃತಿ ಮಲ್ಲಿಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು ೪೫ಕ್ಕೂ ಹೆಚ್ಚು ವಿವಿಧ ಸಾಧನ ಸಲಕರಣೆಗಳಾದ ವ್ಹೀಲ್ ಚೆಯರ್, ಸೈಕಲ್, ಶ್ರವಣ ಯಂತ್ರ ಮುಂತಾದವುಗಳನ್ನು ವಿತರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರಸ್ವತಿ ಸ್ವಾಗತಿಸಿ ಪ್ರಸ್ತಾವನೆಗೈದರು. ತಾ.ಪಂ. ಸಂಯೋಜಕ ಜಯಾನಂದ ಲಾಲ ಕಾರ್ಯಕ್ರಮ ನಿರೂಪಿಸಿ ಶಿಶು ಅಭಿವೃದ್ಧಿ ಕಛೇರಿ ಮೇಲ್ವಿಚಾರಕಿ ರತ್ನಾವತಿ ವಂದಿಸಿದರು. ಸಿಬ್ಬಂದಿ ಗಳಾದ ಕಾವೇರಮ್ಮ, ಯಶೋಧಾ ಉಪಸ್ಥಿತರಿದ್ದರು. ತಾ.ಪಂ. ವಿವಿದೋದ್ಧೇಶ ಕಾರ್ಯಕರ್ತಜಾನ್ ಬಾಪ್ಟಿಸ್ಟ್ ಡಿಸೋಜಾ ಹಾಗೂ ಎಲ್ಲ ಗ್ರಾ.ಪಂ. ಗ್ರಾಮೀಣ ವಿಕಲಚೇತನ ಕಾರ್ಯಕರ್ತರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
-ಕೆ. ಸತ್ಯನಾರಾಯಣ, ಚಿತ್ರ : ಜಾನ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.