ಮಂಗಳೂರು ಧರ್ಮಪ್ರಾಂತ್ಯದ ಐಸಿವೈಎಂನಿಂದ ಕಬಡ್ಡಿ ಮತ್ತು ಹಗ್ಗಜಗ್ಗಾಟ ಪಂದ್ಯಾಟ

icym udgatane copyಬೆಳ್ತಂಗಡಿ : ಐಸಿವೈಎಂ ಘಟಕ ಬೆಳ್ತಂಗಡಿ ವಲಯದಲ್ಲಿ ಅ.30 ರಂದು ಆಯೋಜಿಸಿದ ಮಂಗಳೂರು ಧರ್ಮಪ್ರಾಂತ್ಯದ ಕಬಡ್ಡಿ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಯ ಉದ್ಘಾಟನೆಯನ್ನು ಬದ್ಯಾರ್ ಚರ್ಚಿನ ಧರ್ಮಗುರುಗಳಾದ ವಂ| ಫಾ| ವಿಲ್ಫ್ರೆಡ್ ಗೊನ್ಸಾಲ್ವಿಸ್ ಇವರು ನೆರವೇರಿಸಿದರು.
ಈ ಕಾರ‍್ಯಕ್ರಮಕ್ಕೆ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಫಾಯಲ್ ವೇಗಸ್, ಬೆಳ್ತಂಗಡಿ ವಲಯದ ಐಸಿವೈಎಂ ನಿರ್ದೇಶಕರಾದ ವಂ| ಫಾ| ಅರುಣ್ ಲೋಬೋ, ವಲಯದ ಅಧ್ಯಕ್ಷರಾದ ಜೊವೆಲ್, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶುಭಾ, ಬದ್ಯಾರ್ ಕಾನ್ವೆಂಟಿನ ಸುಪೀರಿಯರ್ ಆದ ಸಿ| ಜಾನೆಟ್, ಬದ್ಯಾರ್ ಆಸ್ಪತ್ರೆಯ ಆಡಳಿತಾಧಿಕಾರಿಯವರಾದ ಸಿ| ಪ್ರೇಮಲತಾ, ಹಾಗೂ ಐಸಿವೈಎಂ ಅಧ್ಯಕ್ಷ ಮನೀಶ್ ಸಿಕ್ವೇರಾ ಉಪಸ್ಥಿತರಿದ್ದರು.
ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಮಡಂತ್ಯಾರ್ ಐಸಿವೈಎಂ ಘಟಕ ಮತ್ತು ದ್ವಿತೀಯ ಸ್ಥಾನವನ್ನು ಪೆರ್ಮಣ್ಣೂರು ಘಟಕ, ಹಗ್ಗಜಗ್ಗಾಟ ಪ್ರಥಮ ಮೊಗರ್ನಾಡು, ದ್ವಿತೀಯ ಗರ್ಡಾಡಿ ಘಟಕ ಪಡೆದುಕೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.