ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನ ಮಂಡಳಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರಿಗೆ ಸುದ್ದಿ ಬಳಗದಿಂದ ಅಭಿನಂದನೆ

3

2

1ಕರ್ನಾಟಕ ಸರಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾಧಾಯ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟಿರುವ ಮಹತೋಭಾರ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಇಲ್ಲಿನ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿರುವ ಸುಳ್ಯದ ಹಿರಿಯ ಸಹಕಾರಿ, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಯ ಹಿತೈಷಿಗಳೂ ಆಗಿರುವ ನಿತ್ಯಾನಂದ ಮುಂಡೋಡಿ ಅವರು ನ.೦೩ರಂದು ಬೆಳ್ತಂಗಡಿ ಸುದ್ದಿ ಕಛೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ಬೆಳ್ತಂಗಡಿ ಸುದ್ದಿ ಬಳಗದ ಪರವಾಗಿ ಹೂಗುಚ್ಚ ನೀಡಿ ಅಭಿನಂದಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ| ಯು.ಪಿ ಶಿವಾನಂದ , ಸುದ್ದಿ ಕಛೇರಿ ವ್ಯವಸ್ಥಾಪಕ ಮಂಜುನಾಥ ರೈ, ಸಹ ವ್ಯವಸ್ಥಾಪಕ ಜಾರಪ್ಪ ಪೂಜಾರಿ, ಹಿರಿಯ ವರದಿಗಾರ ಬಿ.ಎಸ್ ಕುಲಾಲ್, ವರದಿಗಾರ ಅಶ್ರಫ್ ಆಲಿಕುಂಞಿ, ಜಾಹಿರಾತು ಮುಖ್ಯಸ್ಥ ತುಕರಾಮ್ ಬಿ, ಪ್ರಸರಣ ವಿಭಾಗ ಮುಖ್ಯಸ್ಥ ತಿಮ್ಮಪ್ಪ ಗೌಡ, ಈಶ್ವರ ಪಿ.ಹೆಚ್, ಹೆರಾಲ್ಡ್ ಪಿಂಟೊ, ಸಂತೋಷ್ ಕೋಟ್ಯಾನ್, ಆನಂದ ಗೌಡ, ನಿತಿನ್ ಗೌಡ, ಶ್ರೀಮತಿ ಸುಧಾ, ರೇಷ್ಮಾ, ಪಲ್ಲವಿ, ಸುಶ್ಮಿತಾ ಇವರುಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.