ಪತಂಜಲಿ ಮಾರಾಟ ಮಳಿಗೆಯ ಉದ್ಘಾಟನೆ

vnr patanjali copyವೇಣೂರು: ಪತಂಜಲಿಯ ವಿಶ್ವಮಟ್ಟದ ಗ್ರಹೋಪಯೋಗಿ ಹಾಗೂ ಆರೋಗ್ಯವರ್ಧಕ ಉತ್ಪನ್ನಗಳ ‘ಪುನರ್ನವ ಮಾರಾಟ ಮಳಿಗೆಯು ಅ.31ರಂದು ಇಲ್ಲಿಯ ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಮೂಡಬಿದಿರೆ ಪತಂಜಲಿ ಯೋಗ ಸಮಿತಿಯ ಯೋಗ ಶಿಕ್ಷಕ ಶರತ್, ವೇಣೂರಿನ ಉದ್ಯಮಿ ಭಾಸ್ಕರ ಪೈ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಉದ್ಯಮಿ ಬಾಲಕೃಷ್ಣ ಭಟ್, ವೇಣೂರು ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ರಾಮದಾಸ್ ನಾಯಕ್, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರಿನ ಉದ್ಯಮಿಗಳು, ವಿವಿಧ ಅಂಗಡಿ ಮಾಲಿಕರು ಉಪಸ್ಥಿತರಿದ್ದರು. ಪತಂಜಲಿ ಮಳಿಗೆಯ ಮಾಲಕರಾದ ಮೂಂಕಾಡಿ ರಾಮಚಂದ್ರ ನಾಯಕ್ ಹಾಗೂ ಕುಟುಂಬಸ್ಥರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.