ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ ಹಾಲು ಉತ್ಪಾದಕರಿಗೆ ಒಕ್ಕೂಟದಿಂದ ಎಲ್ಲ ರೀತಿಯ ನೆರವು : ರವಿರಾಜ್ ಹೆಗ್ಡೆ


Padpu milk 1 copy Padpu milk copyಹೆಚ್ಚು ಹಾಲು ಪಡೆಯಲು ಜಾನುವಾರಿಗೆ ಹೆಚ್ಚು ಕುಡಿಯುವ ನೀರು ದೊರೆಯುವಂತೆ ಮಾಡಬೇಕು. ಹಾಲು ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಲು ಹೈನುಗಾರಿಕಾ ಸೂಕ್ತ ತರಬೇತಿ ಅಗತ್ಯ. ಮಕ್ಕಳು ಡಿಗ್ರಿ ಶಿಕ್ಷಣ ಪಡೆದು ಪೇಟೆಗೆ ಹೋಗಿ 4-5 ಸಾವಿರ ರೂ ಸಂಬಳಕ್ಕೆ ದುಡಿದು ಅದರಲ್ಲಿ ಬರುವ ಸಂಬಳದಲ್ಲಿ ಬಹುಪಾಲನ್ನು ಪ್ರಯಾಣಕ್ಕೆ ಮತ್ತು ಹೊಟೇಲ್ ಊಟಕ್ಕೆ ಖರ್ಚು ಮಾಡುವ ಬದಲು ಮನೆಯಲ್ಲೇ ಹೈನುಗಾರಿಕೆ ಪ್ರಾರಂಭಿಸಿ ಸ್ವಾವಲಂಭಿಯಾಗಬಹುದು. ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

ರವಿರಾಜ್ ಹೆಗ್ಡೆ, ಅಧ್ಯಕ್ಷರು. ದ.ಕ. ಜಿಲ್ಲಾ ಹಾಲು ಒಕ್ಕೂಟ.

*ಒಕ್ಕೂಟದ ವ್ಯಾಪ್ತಿಯಲ್ಲಿ ಪಡ್ಪು ಸಂಘ 694ನೇ ಸಂಘ.
*ಜಿಲ್ಲೆಯಲ್ಲಿ 373ನೇ ಸಂಘವಾಗಿ ಅಸ್ತಿತ್ವಕ್ಕೆ.
*ಉತ್ತಮ ಗುಣಮಟ್ಟದ ಹಾಲಿಗೆ ಸಬ್ಸಿಡಿ ಸೇರಿ ಸರಾಸರಿ 35 ರೂ. ದೊರೆತಂತಾಗುತ್ತಿದೆ.
*ದಿನಕ್ಕೆ 70 ಲಕ್ಷ ಲೀಟರ್ ಹಾಲು ಉತ್ಪಾದನೆ, ಬಳಕೆಯಾಗಿ 45 ಲಕ್ಷ ಲೀಟರ್ ಬಳಕೆಯಾಗಿ ಉಳಿಕೆ ಇತರ ರಾಜ್ಯಕ್ಕೆ ಸರಬರಾಜು.
*ಒಕ್ಕೂಟದ ವ್ಯಾಪ್ತಿಯಲ್ಲಿ ಬೆಳ್ತಂಗಡಿ ತಾಲೂಕಿನಿಂದ ಅತಿ ಹೆಚ್ಚು ಹಾಲು ಸಂಗ್ರಹದ ದಾಖಲೆ.

ಪಡ್ಪು : ಹಾಲು ಉತ್ಪಾದಕರಿಗೆ ಪ್ರತೀ ಲೀಟರ್‌ಗೆ ಸರಕಾರ ಪ್ರೋತ್ಸಾಹ ಧನ ನೀಡುತ್ತಿರುವುದರ ಜೊತೆಗೆ ಒಕ್ಕೂಟದ ವತಿಯಿಂದ ಹಾಲು ಕರೆಯುವ ಯಂತ್ರ, ಗೋಬರ್ ಗ್ಯಾಸ್‌ಗೆ ನೆರವು, ಹಸಿರು ಮೇವು ಪ್ರೋತ್ಸಾಹ, ರೈತ ಕಲ್ಯಾಣ ನಿಧಿ ಮೂಲಕ ವಿಮಾ ಪರಿಹಾರ, ಜಾನುವಾರುಗಳಿಗೆ ಮತ್ತು ಮಾಲಿಕರಿಗೆ ಅನುಕೂಲವಾಗುವ ವಿಮಾ ಯೋಜನೆ, ಹಾಲು ಉತ್ಪಾದಕರ ಮಕ್ಕಳಿಗೆ ತಾಂತ್ರಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಸ್ಕಾಲರ್‌ಶಿಪ್ ವಿತರಣೆ, ಹೈನುಗಾರರಿಗೆ ಮಾಹಿತಿ ಕಾರ್ಯಾಗಾರ ಇತ್ಯಾಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಆ ಮೂಲಕ ಎಲ್ಲ ರೀತಿಯಿಂದಲೂ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ದ.ಕ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೆ ರವಿರಾಜ್ ಹೆಗ್ಡೆ ಹೇಳಿದರು.
ಪಡ್ಪು ಇಲ್ಲಿ ನೂತನವಾಗಿ ರಚನೆಗೊಂಡ ಹಾಲು ಉತ್ಪಾದಕರ ಸಹಕಾರಿ ಸಂಘ ಕನ್ಯಾಡಿ | ಇದರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮವು ಶ್ರೀ ಸದಾಶಿವೇಶ್ವರ ಭಜನಾ ಮಂದಿರ ವಠಾರ ಮಂಗಳಪಲ್ಕೆಯಲ್ಲಿ ಜರುಗಿತು.
ಬಂಗಾಡಿ ಸಹಕಾರಿ ಸಂಘದ ಅಧ್ಯಕ್ಷ ಎನ್. ಲಕ್ಷ್ಮಣ ಗೌಡ ಇರ್ತಿಲಾಲ್ ಸಭಾಧ್ಯಕ್ಷತೆ ವಹಿಸಿದ್ದು, ಹಾಲಿನುತ್ಪಾದನೆಯಲ್ಲಿ ಧನಾತ್ಮಕ ಅಂಶಗಳಿದ್ದು ಅದನ್ನೇ ಜನತೆಗೆ ಸಂದೇಶ ನೀಡಬೇಕು. ಋಣಾತ್ಮಕ ವಿಷಯಗಳನ್ನು ಬಹಿರಂಗ ಪಡಿಸದೆ ಮುಚ್ಚಿಡಬೇಕು. ಕ್ಷೇತ್ರಕ್ಕೆ ಇಳಿದ ಬಳಿಕ ಆಗುವ ಋಣಾತ್ಮಕ ಅಂಶಗಳು ಹೈನುಗಾರರು ಎದುರಿಸುತ್ತಾ ಮುಂದೆ ಸಾಗುತ್ತಾರೆ. ಅದಕ್ಕೆ ಅವರನ್ನು ತಯಾರುಗೊಳಿಸಬೇಕು ಎಂದರು.
ಬಂಗಾಡಿ ಸಹಕಾರಿ ಸಂಘದ ಶಾಖೆ ಬೇಕು ಎಂದು ಇಲ್ಲಿನವರು ಕೇಳಿಕೊಂಡಿದ್ದು ಅದನ್ನು ಮಾಡುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ದ.ಕ. ಹಾಲು ಒಕ್ಕೂಟ ನಿರ್ದೇಶಕರುಗಳಾದ ಸೀತಾರಾಮ ರೈ ಸವಣೂರು, ಪದ್ಮನಾಭ ಶೆಟ್ಟಿ ಅರ್ಕಜೆ, ನಾರಾಯಣ ಪ್ರಕಾಶ್, ದ.ಕ. ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಬಿ.ವಿ ಸತ್ಯನಾರಾಯಣ, ಲಾಲ ಕ್ಷೇತ್ರದ ಜಿ.ಪಂ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ ಉಪಸ್ಥಿತರಿದ್ದರು.
ಪಡ್ಪು ಹಾಲು ಸೊಸೈಟಿ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಂಗಳೂರು ದ.ಕ ಹಾಲು ಒಕ್ಕೂಟ ಮಂಗಳೂರು ಸಹಾಯಕ ವ್ಯವಸ್ಥಾಪಕ ಎಂ.ಶ್ರೀನಿವಾಸ್, ಪಡ್ಪು ಹಾಲು ಸೊಸೈಟಿ ಅಧ್ಯಕ್ಷ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
ನಿರ್ದೇಶಕ ರಘುಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಭಾಸ್ಕರ ಶೆಟ್ಟಿ ಧನ್ಯವಾದ ಸಲ್ಲಿಸಿದರು. ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್, ಸಂಘದ ನಿರ್ದೇಶಕರಾದ ಸುನಿಲ್ ಪಿಂಟೋ, ಸಂಜೀವ ನಾಯ್ಕ, ವಿಮಲಾ, ಬೇಬಿ, ಸಂತೋಷ್ ಗೌಡ, ಅಣ್ಣಪ್ಪ ಗೌಡ, ಡೇನಿಸ್ ವೇಗಸ್, ರಮೇಶ್ ಬಂಗೇರ,ಹಾಗೂ ಊರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.