ಕೃಷಿ ಉತ್ಸವ-ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಚಪ್ಪರ ಮೂಹೂರ್ತ

padangadi chappara muhurta copy

ಪಡಂಗಡಿ: ನ.3 ರಿಂದ ನ. 4ರವರೆಗೆ ಪಡಂಗಡಿ ಸರ್ಕಾರಿ ಹಿ.ಪ್ರಾ. ಶಾಲಾ ಕ್ರೀಡಾಂಗಣದಲ್ಲಿ ಜರಗಲಿರುವ ತಾಲೂಕು ಕೃಷಿ ಉತ್ಸವ ಹಾಗೂ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ದಶಮಾನೋತ್ಸವ ಕಾರ್ಯಕ್ರಮಕ್ಕೆ ಅ. 31ರಂದು ಚಪ್ಪರ ಮೂಹೂರ್ತ ನೆರವೇರಿತು.
ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಹೆಗ್ಡೆಯವರು ಚಪ್ಪರದ ಮೂಹೂರ್ತವನ್ನು ನೆರವೇರಿಸಿದರು.
ಕೃಷಿ ಉತ್ಸವ ಮತ್ತು ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ದಶಮಾನೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜಿ. ಜೈನ್, ಪಡಂಗಡಿ ಪ್ರಾ.ಕೃ.ಪ.ಸ. ಸಂಘದ ಉಪಾಧ್ಯಕ್ಷೆ ಡಿ.ಬಿ. ಅನಸೂಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಖೇಶಿನಿ, ಮಲ್ಲಿಪ್ಪಾಡಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಮರನಾಥ ಹೆಗ್ಡೆ, ಪಡಂಗಡಿ ಗ್ರಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್ ಜೈನ್, ಸಹಕಾರಿ ಸಂಘದ ನಿರ್ದೇಶಕರುಗಳಾದ ಮ್ಯಾಕ್ಸಿನ್ ಸಿಕ್ವೇರಾ, ಶಂಕರ ಶೆಟ್ಟಿ, ಚಪ್ಪರ ಸಮಿತಿ ಅಧ್ಯಕ್ಷ ನಾರಾಯಣ ಮೂಲ್ಯ, ಬೆಳ್ತಂಗಡಿ ವಿಜಯ ಕ್ರೇಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ತಾಲೂಕು ಕೃಷಿ ಅಧಿಕಾರಿ ರಾಮ್‌ಕುಮಾರ್, ಚಂದ್ರಕಾಂತ್ ಜೈನ್, ವಿವಿಧ ಸಮಿತಿ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.