ಗರ್ಡಾಡಿಯಲ್ಲಿ ರೂ.1.50ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಂತ ಸೆಬೆಸ್ಟಿಯನ್ ಚರ್ಚಿಗೆ ಮತ್ತು ಗುರುಗಳ ನಿವಾಸಕ್ಕೆ ಶಿಲಾನ್ಯಾಸ

Advt_NewsUnder_1
Advt_NewsUnder_1
Advt_NewsUnder_1

gardady news copyಗರ್ಡಾಡಿ : 2013ರಲ್ಲಿ ಸ್ಥಾಪನೆಯಾದ ಸಂತ ಸೆಬೆಸ್ಟಿಯನ್ ಚರ್ಚಿನ ನೂತನ ಕಟ್ಟಡಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ| ಎಲೋಶಿಯಸ್ ಪೌಲ್ ಡಿಸೋಜರವರು ಅ.30ರಂದು ಚರ್ಚ್‌ನ ನೂತನ ಕಟ್ಟಡಕ್ಕ ಶಿಲಾನ್ಯಾಸ ನೆರವೇರಿಸಿದರು.
ಸಂತ ಸೆಬೆಸ್ಟಿಯನ್‌ರವರಿಗೆ ಅರ್ಪಿಸಿದ ಗರ್ಡಾಡಿ ಚರ್ಚ್ ಮಡಂತ್ಯಾರ್ ಸೆಕ್ರೆಡ್ ಹಾರ್ಟ್ ಚರ್ಚಿನ ಒಂದು ಅಂಗವಾಗಿದ್ದು, ಇಲ್ಲಿಯ ಕ್ರೈಸ್ತ ಭಕ್ತಾದಿಗಳಿಗೆ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ದೂರವಾಗಿರುವುದರಿಂದ ಪೂಜಾ ವಿಧಿಗಳನ್ನು ಶಾಲೆಯ ಸಭಾಂಗಣದಲ್ಲಿ ನಡೆಸಿಕೊಡುತ್ತಿದ್ದರು. 25 ವರ್ಷಗಳ ಹಿಂದೆ ಈ ಭಾಗದಲ್ಲಿ ಜನರು ಒಂದು ಚಿಕ್ಕ ದೇವಾಲಯವನ್ನು ಕಟ್ಟಲು ಉತ್ಸಾಹದಿಂದ ಯೋಜನೆಯನ್ನು ಮಾಡಿದ್ದರಾದರೂ ಅವರ ಕನಸು ನನಸಾಗಲಿಲ್ಲ. 2013ರಲ್ಲಿ ಗರ್ಡಾಡಿಯನ್ನು ಸ್ವತಂತ್ರ ಧರ್ಮಕೇಂದ್ರವನ್ನಾಗಿ ಬಿಷಪರು ಘೋಷಿಸಿದರಾದರೂ ಪೂಜೆ ಪುರಸ್ಕಾರಗಳಿಗೆ ಚರ್ಚ್ ಕಟ್ಟಡ ಹಾಗೂ ಗುರುಗಳಿಗೆ ನಿವಾಸವು ಇರುವುದಿಲ್ಲ. ಎಲ್ಲಾ ಧಾರ್ಮಿಕ ವಿಧಿ-ವಿಧಾನಗಳು ಶಾಲೆಯ ಸಭಾಂಗಣದಲ್ಲಿಯೇ ನಡೆಯುತ್ತಿತ್ತು. ಧಾರ್ಮಿಕ ಆಚರಣೆಗೆ ವಾತಾವರಣ ಸಮರ್ಪಕವಾಗಿಲ್ಲದ ಕಾರಣ ರೂ ೧.೫೦ ಕೋಟಿ ವೆಚ್ಚದಲ್ಲಿ ನೂತನ ಚರ್ಚ್ ಮತ್ತು ಗುರುಗಳ ನಿವಾಸ ನಿರ್ಮಾಣವಾಗಲಿದೆ.
ಬಲಿ ಪೂಜೆ ಅರ್ಪಿಸಿ, ಶಿಲಾನ್ಯಾಸ ನೆರವೇರಿಸಿದ ಧರ್ಮಾಧ್ಯಕ್ಷರು ದೇವರಿಗೆ ಇಷ್ಟು ಖರ್ಚಿನ ದೇವಾಲಯ ಬೇಡ, ಆದರೆ ಭಕ್ತಾದಿಗಳಾದ ನಮಗೆ ಆರಾಧನೆಗೆ ಒಟ್ಟಿಗೆ ಬರಲು ಅದರ ಅವಶ್ಯಕತೆ ಇದೆ. ದೇವರು ನಮ್ಮ ಶ್ರಮ , ಆಸೆ-ಆಕಾಂಕ್ಷೆಯನ್ನು ಮೆಚ್ಚುತ್ತಾರೆ. ಮತ್ತು ನಮ್ಮಲ್ಲಿ ನೆಲೆಸಲು ಬರುತ್ತಾರೆ. ನಾವೆಲ್ಲರೂ ಒಟ್ಟಿಗೆ ದುಡಿದು ದೇವಾಲಯ ಕಟ್ಟೋಣ ಹಾಗೂ ಉದಾರ ಮನಸ್ಸಿನ ದಾನಿಗಳ ನೆರವಿನಿಂದ ಈ ಕಟ್ಟಡದ ಕೆಲಸವು ಪೂರ್ಣಗೊಳ್ಳಲಿ. ಸಂತ ಸೆಬೆಸ್ಟಿಯನ್‌ರವರು ನಿಮಗೆ ನೆರವಾಗಲಿ ಎಂದು ಶುಭ ಹಾರೈಸಿದರು.
ಗರ್ಡಾಡಿ ಧರ್ಮಕೇಂದ್ರದ ಗುರುಗಳಾದ ವಂ| ಫಾ| ಮಾರ್ಕ್ ಸಲ್ಡಾನ್ಹರವರು ಬಿಷಪರನ್ನು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಈ ಸಂದಭ್ದಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚಿನ ಗುರುಗಳಾದ ವಂ| ಫಾ| ಲಾರೆನ್ಸ್ ಮಸ್ಕರೇನಸ್, ದಯಾಳ್ ಭಾಗ್ ಆಶ್ರಮದ ವಂ| ಫಾ| ನವೀನ್ ಡಿಸೋಜಾ, ಪಾಲನ ಸಮಿತಿಯ ಉಪಾಧ್ಯಕ್ಷ ಲೀಯೋ ಸೆರಾವೊ, ಕಾರ್ಯದರ್ಶಿ ಡೆನಿಸ್ ಫೆರ್ನಾಂಡಿಸ್, ಗುರಿಕಾರ್ ಪ್ರವೀಣ್ ಮೋನಿಸ್, ಲೀಯೋ ಸಿಕ್ವೇರಾ, ಮೇರಿ ಫೆರ್ನಾಂಡೀಸ್‌ರವರು ಪಡಂಗಡಿ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ಸಂತೋಷ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.