ಉಜಿರೆ ನಗರದಲ್ಲಿ ಎಸ್‌ಬಿಎಸ್ ಬಾಲ ಮುನ್ನಡೆ ರ‍್ಯಾಲಿ ನ. 12 ರ ಎಸ್‌ಇಡಿಸಿ ಸ್ಪಟಿಕ ಮಹೋತ್ಸವದ ಪ್ರಚಾರ

rally ಉಜಿರೆ: ಮೌಲ್ಯಗಳ ರಕ್ಷಣೆಗೆ ಮದ್ರಸ ಶಿಕ್ಷಣ ಎಂಬ ಧ್ಯೇಯ ವಾಕ್ಯದಡಿ ಸುನ್ನೀ ಎಜುಕೇಶನ್ ಡೆವಲಪ್‌ಮೆಂಟ್ ಕಮಿಟಿ (ಎಸ್‌ಇಡಿಸಿ) ಸ್ಪಟಿಕ ಮಹೋತ್ಸವ ನ. 12 ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದ್ದು ಅದರ ಪ್ರಚಾರ ಪ್ರಯುಕ್ತ ಎಸ್.ಎಮ್.ಎ ಉಜಿರೆ ರೇಂಜ್ ಇದರ ವತಿಯಿಂದ ಎಸ್‌ಬಿಎಸ್ ಬಾಲ ಮುನ್ನಡೆ ಕಾಲ್ನಡಿಗೆ ರ‍್ಯಾಲಿ ಅ. 30ರಂದು ಉಜಿರೆ ನಗರದಲ್ಲಿ ಜರುಗಿತು.
ಉದ್ಘಾಟನೆ ನೆರವೇರಿಸಿದ ಪತ್ರಕರ್ತ ಅಶ್ರಫ್ ಆಲಿಕುಂಞಿ ಮಾತನಾಡಿ, ಮದರಸದ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಕಲಿಸುವುದು, ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವುದು, ಪ್ರಜಾಪ್ರಭುತ್ವ- ಸಂವಿಧಾನದ ಆಶಯಗಳ ರಕ್ಷಣೆ ಮತ್ತು ಜಾಗೃತಿ ಹಾಗೂ ದೇಶಾಭಿಮಾನ ಉಕ್ಕಿಸುವ ರೀತಿಯಲ್ಲಿ ಎಸ್‌ಇಡಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸ್ಲಾಘನೀಯವಾದುದು. ಅದರ ಜೊತೆಗೆ ಧಾರ್ಮಿಕ ವಿದ್ಯಾಭ್ಯಾಸ ಬೋಧಿಸುವ ಮದರಸ ಅಧ್ಯಾಪಕವೃಂದದ ಕ್ಷೇಮಾಭಿವೃದ್ಧಿ ಮತ್ತು ಅವರ ರಕ್ಷಣೆಯ ನಿಟ್ಟಿನಲ್ಲಿ ಹುಟ್ಟಿಕೊಂಡ ಸಂಘಟನೆ ಇಂದು ಶಕ್ತಿಯಾಗಿ ರೂಪುಗೊಂಡಿದೆ ಎಂದರು. ಜಾಥಾದಲ್ಲಿ 17 ಮದರಸಗಳ 300 ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಈ ಸಂದರ್ಭ ಉಜಿರೆ ಟೌನ್ ಮಸೀದಿ ಅಧ್ಯಕ್ಷ ಎ. ಆರ್ ಅಬ್ದುಲ್ ರಹಿಮಾನ್, ಬಶೀರ್ ಅಪ್ನಿ, ರೇಂಜ್ ಅಧ್ಯಕ್ಷ ಖಾಲಿದ್ ಮುಸ್ಲಿಯಾರ್ ಕುಂಟಿನಿ, ಇಬ್ರಾಹಿಂ ಸಖಾಫಿ, ಆದಂ ಮದಿ ಕಕ್ಕೆಜಾಲು, ಅಬ್ದುಲ್ ಅಝೀಝ್ ನಿಡಿಗಲ್, ಇಸ್ಮಾಯಿಲ್ ಸಖಾಫಿ ಅಜಿಕುರಿ, ಅಶ್ರಫ್ ಹಿಮಮಿ, ಬಿ.ಎಮ್ ಹಮೀದ್, ಎಸ್.ಎಂ ಕೋಯ ತಂಙಳ್, ಮೊದಲಾದವರು ಭಾಗಿಯಾಗಿದ್ದರು.
ಚಿತ್ರ: ಜಮಾಲುದ್ದೀನ್ ಲೆತೀಫಿ. ವರದಿ: ಅಚ್ಚು ಮುಂಡಾಜೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.