ಎಸ್ಸೆಸ್ಸೆಫ್‌ನಿಂದ “ಅಸ್ಸುಫ್ಫ” ಧಾರ್ಮಿಕ ಅಧ್ಯಯನ ತರಬೇತಿ ಶಿಬಿರಕ್ಕೆ ಚಾಲನೆ

ASSUFFA GERUKATTEಗೇರುಕಟ್ಟೆ: ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಸ್ಸುಫ್ಪ ಉದ್ಘಾಟನಾ ಸಮಾರಂಭವು ಅ. 29 ರಂದು ಮನ್‌ಷರ್ ಗೆರುಕಟ್ಟೆ ಕ್ಯಾಂಪಸ್‌ನಲ್ಲಿ ನಡೆಯಿತು.ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ನಾಯಕರೂ ಆಗಿರುವ ಸಯ್ಯಿದ್ ಮನ್‌ಷರ್ ತಂಙಳ್ ಅಸ್ಸುಫ್ಪದ ಅವಶ್ಯಕತೆ ಬಗ್ಗೆ ವಿವರಣೆ ನೀಡಿದರು. ಡಿವಿಷನ್ ಅಧ್ಯಕ್ಷ ಅಬ್ದುರಹ್ಮಾನ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಅಸ್ಸುಫ್ಪ ಡಿವಿಷನ್ ಅಮೀರ್ ಉಮರುಲ್ ಫಾರೂಕ್ ಸಖಾಫಿ ವೇಣೂರು ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಮನ್‌ಷರ್ ಮುದರ್ರಿಸ್, ಡಿವಿಷನ್ ಪದಾಧಿಕಾರಿಗಳು ಹಾಜರಿದ್ದು ೫ ಸೆಕ್ಟರ್‌ನ ಅಮೀರ್ ಗಳು, ಸಂಪನ್ಮೂಲ ವ್ಯಕ್ತಿಗಳು ಭಾಗವಹಿದ್ದರು. ಕಾರ್ಯದರ್ಶಿ ಹಾರಿಸ್ ಕುಕ್ಕುಡಿ ವಂದಿಸಿದರು.
ಚಿತ್ರ, ವರದಿ: ಇಕ್ಬಾಲ್ ಮಾಚಾರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.