ಬೆಳ್ತಂಗಡಿ : ಆಲಡ್ಕ ವಾಟ್ಸ್ಯಾಪ್ ಗ್ರೂಪ್‌ನಿಂದ ಮನೆ ಹಸ್ತಾಂತರ

MANE 1

MANE 2

MANE

ಬೆಳ್ತಂಗಡಿ : ವಾಟ್ಸ್ಯಾಪ್ ಗ್ರೂಪ್‌ನ ಸದಸ್ಯರ ಮೊದಲ ಯೋಜನೆಯ ಆಸರೆ ಎಂಬ ಮನೆಯನ್ನು ಕಿಟ್ಟ ಆಚಾರ್ಯ ಪಾಲಬೆಯವರು ಸೂರಿಲ್ಲದೆ ಕಷ್ಟಪಡುತ್ತಿದ್ದು, ಇವರ ಸ್ಥಿತಿಯನ್ನು ಕಂಡು ಸುಮಾರು ೩ ತಿಂಗಳ ಹಿಂದೆ ಪಕ್ಕಾ ಮನೆಯನ್ನು ನಿರ್ಮಿಸುವ ಸಂಕಲ್ಪ ತೊಟ್ಟಿದ್ದರು. ಇದೀಗ ಅಳದಂಗಡಿ ಸನಿಹದ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರದ ವಾಟ್ಸ್ಯಾಪ್ ಗ್ರೂಪ್‌ನ ಸದಸ್ಯರ ಪರವಾಗಿ ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ್ ಅಜಿಲರು ಅ.31ರ ದೀಪಾವಳಿಯ ದಿನದಂದು ಬೀಗದ ಕೀ ನೀಡುವುದರ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅಳದಂಗಡಿ ಗ್ರಾ.ಪಂ ಅಧ್ಯಕ್ಷ ಸತೀಶ್ ಮಿತ್ತಮಾರ್, ಪ್ರಗತಿಪರ ಕೃಷಿಕ ಗಂಗಾಧರ ಮಿತ್ತಮಾರು, ಉದ್ಯಮಿ ರವಿ ಪೂಜಾರಿ, ಹಿಂದೂ ಯುವ ಶಕ್ತಿಯ ಅಧ್ಯಕ್ಷ ರಮೇಶ್ ಹೆಗ್ಡೆ, ಹರೀಶ್ ಕುಲಾಲ್, ಕಿಟ್ಟ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.