ಸೋಶಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್‌ಗೆ ಚಾಲನೆ

SDPI copyಬೆಳ್ತಂಗಡಿ : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಬೆಳ್ತಂಗಡಿ ಇದರ ವತಿಯಿಂದ ಸೋಶಿಯಲ್ ಡೆಮಾಕ್ರಟಿಕ್ ಅಟೋ ಯುನಿಯನ್ (ಎಸ್‌ಡಿಟಿಯು) ಎಸ್‌ಡಿಟಿಯು ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ ಅವರು ತಾಲೂಕು ಸಂಚಾಲಕ ಶಾಹುಲ್ ಉಜಿರೆ ಯವರಿಗೆ ದ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಟಿಯು ತಾಲೂಕು ಉಸ್ತುವಾರಿ ನಿಸಾರ್ ಕುದ್ರಡ್ಕ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಸ್‌ಡಿಟಿಯು ರಾಜ್ಯ ಸಮಿತಿ ಸದಸ್ಯ ರಿಯಾಝ್ ಪರಂಗಿಪೇಟೆ, ಬಂಟ್ವಾಳ ಉಸ್ತುವಾರಿ ಇಸ್ಮಾಯಿಲ್, ಎಸ್‌ಡಿಪಿಟಿ ಬೆಳ್ತಂಗಡಿ ವಿಧಾನ ಸಭಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು. ಪಝಲ್ ರಹಿಮಾನ್ ಸ್ವಾಗತಿಸಿ, ಅಶ್ಪಕ್ ಪುಂಜಾಲಕಟ್ಟೆ ವಂದಿಸಿದರು.ನವಾಝ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ/ವರದಿ: ಅಕ್ಬರ್ ಬೆಳ್ತಂಗಡಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.