ಉಜಿರೆಯ ಜಯಶ್ರೀ ಪ್ರಕಾಶ ಗೌಡರಿಗೆ ಜಿಲ್ಲಾ ಪ್ರತಿಪರ ರೈತ ಮಹಿಳೆ ಪ್ರಶಸ್ತಿ

krishi mela 1 copyಉಜಿರೆ : ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಆಶ್ರಯದಲ್ಲಿ ಶಿವಮೊಗ್ಗ ನವಿಲೆಯ ಕೃಷಿ ಮತ್ತು ತೋಟಗಾರಿಕೆ ವಿ.ವಿ ಆವರಣದಲ್ಲಿ ಅ.21ರಿಂದ 24ರವರೆಗೆ ನಡೆದ ಕೃಷಿ ಮೇಳ-2016ರಲ್ಲಿ ಕೃಷಿ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ದ.ಕ ಜಿಲ್ಲೆಯ ಪ್ರಗತಿಪರ ರೈತ ಮಹಿಳೆ ಪ್ರಶಸ್ತಿಯನ್ನು ಉಜಿರೆಯ ಶ್ರೀಮತಿ ಜಯಶ್ರೀ ಪ್ರಕಾಶ ಗೌಡ ಅಪ್ರಮೇಯ ಪಡೆದುಕೊಂಡಿದ್ದಾರೆ.
ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ಕಂದಾಯ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವಿಧಾನಸಭಾ ಸದಸ್ಯೆ ಶಾರದಾ ಪೂರ‍್ಯ ನಾಯ್ಕ ಪ್ರಧಾನಗೈದರು. ಪ್ರಶಸ್ತಿಗೆ ದ.ಕ ಜಿಲ್ಲೆಯಿಂದ ಈರ್ವರು ಆಯ್ಕೆಗೊಂಡಿದ್ದು ಜಯಶ್ರೀ ಪ್ರಕಾಶ ಗೌಡ ಅವರನ್ನು ಶಾಲು ಹೊದಿಸಿ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಚೆಕ್ ನೀಡಿ ಪುರಸ್ಕರಿಸಲಾಯಿತು. ಮಾಚಾರಿನ ಗಾರ್ಡನಿನಲ್ಲಿ ೨೦೦೨ರಿಂದ ಅಡಿಕೆ, ರಬ್ಬರ್, ಕಾಳು ಮೆಣಸು, ಕೊಕ್ಕೋ ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಂಡ ಜಯಶ್ರೀ ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಇಳುವರಿ ಪಡೆಯುವಲ್ಲಿ ನಿರಂತರ ಶ್ರಮಜೀವಿ. ಉಜಿರೆಯ ಮಾತೃಮಂಡಳಿಯ ಸಕ್ರೀಯ ಸದಸ್ಯೆಯಾಗಿ ಧಾರ್ಮಿಕ ಭಜನೆ, ಶಾರದಾ ಪೂಜಾ ಸಮಿತಿಯ ಉಪಾಧ್ಯಕ್ಷೆಯಾಗಿ, ಉಜಿರೆಯ ಪಗರಗತಿ ಮಹಿಳಾ ಮಂಡಲದ ಸದಸ್ಯೆಯಾಗಿ ೨ ವರ್ಷ ಕಾರ್ಯದರ್ಶಿಯಾಗಿ, ಬದನಾಜೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಸದಸ್ಯೆಯಾಗಿ ತನ್ನನ್ನು ತೊಡಗಿಸಿಕೊಂಡವರು. ಇವರು ಉಜಿರೆ ರಬ್ಬರು ಸೊಸೈಟಿ ಉದ್ಯೋಗಿ ಪ್ರಕಾಶ್ ಗೌಡರ ಪತ್ನಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.